×
Ad

ಪುತ್ತೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟನೆ

Update: 2016-01-13 00:21 IST

ಪುತ್ತೂರು, ಜ.12: ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆ ಇದೆ ಎನ್ನುವ ವಾಸ್ತವವನ್ನು ಅರಿತುಕೊಂಡು ರಸ್ತೆಯಲ್ಲಿ ವಾಹನ ಚಲಾವಣೆ ಮಾಡಬೇಕು ಎಂದು ಪುತ್ತೂರಿನ ವೈದ್ಯ ಡಾ.ಎಸ್.ಭಾಸ್ಕರ್ ಹೇಳಿದರು. ಅವರು ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಂಗಳವಾರ ನಡೆದ 27ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯಂತೆ ಸಾವಿನ ಸಂಖ್ಯೆಯಲ್ಲಿ ಅಪಘಾತಕ್ಕೆ ಮೊದಲ ಸ್ಥಾನವಿದೆ. ಹಿಂದೆ ಹೃದ್ರೋಗ ಮತ್ತು ಕ್ಯಾನ್ಸರ್ ಪ್ರಥಮ ಸ್ಥಾನದಲ್ಲಿತ್ತು. ಈಗ ರಸ್ತೆ ಅಪಘಾತ ಇದನ್ನು ಆಕ್ರಮಿಸಿಕೊಂಡಿದೆ. ಅಪಘಾತಗಳ ನಿಯಂತ್ರಣಕ್ಕೆ ರಸ್ತೆ ನಿಯಮಗಳ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಅಪಘಾತ ಸಂಭವಿಸಿದ ಮೊದಲ 1 ಗಂಟೆಯನ್ನು ಗೋಲ್ಡನ್ ಟೈಮ್ ಎನ್ನುತ್ತಾರೆ. ಈ ಹೊತ್ತಿನಲ್ಲಿ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಆ ಜೀವನ್ನು ಉಳಿಸಿಕೊಳ್ಳಬಹುದು. ಆದರೆ ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು

ನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಚ್.ಇ.ನಾಗರಾಜ್ ಮಾತನಾಡಿ, ವಾಹನಗಳ ಸಂಖ್ಯೆ ಅಕಗೊಳ್ಳುತ್ತಿರುವಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಹೆತ್ತವರು ಮಕ್ಕಳಿಗೆ ವಾಹನ ಖರೀದಿಸಿ ಕೊಡುವಾಗ ಎಚ್ಚರಿಕೆ ವಹಿಸಬೇಕು. ಕಾನೂನು ಪಾಲನೆ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿ ಯರ್ ಪ್ರಮೋದ್ ಕೆ. ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಕಾರಿ ಜಿ.ಎಸ್.ಶಶಿಧರ್ ಮಾತನಾಡಿ, ತಾಲೂಕಿನ 312 ಶಾಲೆಗಳಲ್ಲಿ 1ರಿಂದ 10ನೆ ತರಗತಿಯವರೆಗೆ 49,772 ವಿದ್ಯಾರ್ಥಿಗಳಿದ್ದಾರೆ. ಪ್ರತಿ ಯೋರ್ವ ವಿದ್ಯಾರ್ಥಿಯೂ ತನ್ನ ಮನೆಯಲ್ಲಿ ಸಂಚಾರ ನಿಯಮದ ಕುರಿತು ಅರಿವು ಮೂಡಿಸಿದರೆ, ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು ಎಂದರು.

ಪುತ್ತೂರು ಪ್ರಾದೇಶಿಕ ಸಾರಿಗೆ ಅಕಾರಿ ೆಲಿಕ್ಸ್ ಡಿಸೋಜ ಸ್ವಾಗತಿಸಿದರು. ಕಚೇರಿ ಅೀಕ್ಷಕ ಜನಾರ್ದನ ಗೌಡ ವಂದಿಸಿ ದರು. ಸೌಮ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News