ಬಿಜೈ: ಮಿನಿ ಉದ್ಯಾನವನಕ್ಕೆ ಶಿಲಾನ್ಯಾಸ
ಮಂಗಳೂರು, ಜ. 12: ಸ್ವಾಮಿ ವಿವೇಕಾನಂದರ ಜೀವನ ನಮಗೆಲ್ಲರಿಗೂ ಸೂರ್ತಿ ದಾಯಕ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ನಗರದ ಬಿಜೈಯಲ್ಲಿರುವ ಮಹಾನಗರ ಪಾಲಿಕೆಯ ಮಿನಿ ಉದ್ಯಾನವನಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸ್ವಾಮಿ ವಿವೇಕಾನಂದರ 153ನೆ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಮಕೃಷ್ಣ ಮಠದ ಶ್ರೀ ಧರ್ಮವೃತಾನಂದ ಸ್ವಾಮೀಜಿ, ಮನಪಾ ಆರೋಗ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಕಾರ್ಪೊರೇಟರ್‌ಗಳಾದ ಲ್ಯಾನ್ಸ್ ಲಾಟ್ ಪಿಂಟೊ, ಲತ್ೀ ಕಂದಕ್, ಕವಿತಾ ಸನಿಲ್, ಮಾಜಿ ಮುಡಾ ಅಧ್ಯಕ್ಷ ಬಿ.ಜಿ.ಸುವರ್ಣ, ಭಂಡಾರಿ ಬಿಲ್ಡರ್ಸ್ ಮಾಲಕ ಲಕ್ಷ್ಮೀಶ್ ಭಂಡಾರಿ, ಅರುಣ್ ಕುವೆಲ್ಲೊ, ಸುರೇಶ್ ಶೆಟ್ಟಿ, ಟಿ.ಕೆ.ಸುೀರ್, ದೇವಪ್ಪ ಸುವರ್ಣ, ಮೋಹನ್ ಮೆಂಡನ್, ಲೂರ್ಡ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಿತಿಕಾ ಡಿಸಿಲ್ವ, ಸೈಂಟ್ ್ರಾನ್ಸಿಸ್ ಕ್ಸೇವಿಯರ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೋನಾ ಮೊದಲಾದವರು ಉಪಸ್ಥಿತರಿದ್ದರು.
ಪ್ರೇಮನಾಥ್ ಬಲ್ಲಾಳ್ ಬಾಗ್ ವಂದಿಸಿದರು. ರಘುರಾಜ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು.