×
Ad

ಕ್ರಿಯಾಶೀಲ ವ್ಯಕ್ತಿತ್ವದಿಂದ ಸಬಲ ಸಮಾಜ: ಡಾ.ವಿಶಾಲ್

Update: 2016-01-13 00:24 IST

ಉಡುಪಿ ಜ.12: ಕ್ರಿಯಾಶೀಲ ಜೀವನ ಶೈಲಿಯಿಂದ ಜೀವಂತ ಸಮಾಜ ಗೋಚರಿಸುತ್ತದೆ. ಯುವಶಕ್ತಿಗೆ ಇಂಥ ಕನಸುಗಳನ್ನು ನನಸು ಮಾಡುವ ಶಕ್ತಿಯಿದೆ ಎಂದು ಜಿಲ್ಲಾಕಾರಿ ಡಾ.ವಿಶಾಲ್ ಆರ್. ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಸಂಬಂಧ ಪರಿಸರದ 16 ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಿನಿ ಮ್ಯಾರಥಾನ್‌ಗೆ ನಗರದ ಪುರಭವನದ ಬಳಿ ಹಸಿರು ನಿಶಾನೆ ತೋರಿಸುವ ಮುನ್ನ ಅವರು ಮಾತನಾಡುತ್ತಿದ್ದರು. ಮೂರು ಕಿ.ಮೀ. ದೂರದ ‘ಉಡುಪಿ ರನ್ನಿಂಗ್’ ಮ್ಯಾರಥಾನ್ ಪುರಭವನದ ಬಳಿಯಿಂದ ಆರಂಭ ಗೊಂಡು ನಗರದ ಪ್ರಮುಖ ಮಾರ್ಗ ಗಳಲ್ಲಿ ಸಾಗಿ ಅಜ್ಜರಕಾಡು ಮೈದಾನದಲ್ಲಿ ಮುಕ್ತಾಯಗೊಂಡಿತು. ಬಳಿಕ ಅಲ್ಲಿ ನಡೆದ ಯುವ ಸಪ್ತಾಹದಲ್ಲಿ ವಿಜಯಿ ವಿದ್ಯಾರ್ಥಿಗಳಿಗೆಬಹುಮಾನ ವಿತರಿಸಲಾಯಿತು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಜಿಲ್ಲೆ 317-ಸಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಅಸೋಸಿಯೇಶನ್ ಆ್ ಕೋಸ್ಟಲ್ ಟೂರಿಸಂ ಉಡುಪಿ, ಸಾರಿಗೆ ಇಲಾಖೆ ಉಡುಪಿ ಜಿಲ್ಲೆ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇವರ ಸಹಯೋಗದೊಂದಿಗೆ ಈ ಮ್ಯಾರಥಾನ್ ಆಯೋಜಿಸಲಾಗಿತ್ತು.

ಬಹುಮಾನ ವಿಜೇತರ ವಿವರ ಹೀಗಿದೆ

 ಪುರುಷರು: 1.ಮಂಜುನಾಥ, ನಿಟ್ಟೆ ಪ್ರಥಮ ದರ್ಜೆ ಕಾಲೇಜು, 2.ಹನುಮಂತ, ಸೈಂಟ್ ಮೇರೀಸ್ ಕಾಲೇಜು ಶಿರ್ವ, 3. ಸಂದೇಶ್ ನಾಯಕ್, ಎಂಪಿಎಂಸಿ, ಮಣಿಪಾಲ. ಮಹಿಳೆಯರು: 1.ಜ್ಯೋತಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ, 2.ನಿಶ್ಮಿತಾ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, 3.ಅನಸೂಯ, ಎಂಪಿಎಂಸಿ, ಮಣಿಪಾಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News