×
Ad

ಉಡುಪಿ: ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಪ್ರಥಮ ನೇರ ನೇಮಕಾತಿ

Update: 2016-01-13 00:27 IST

ಉಡುಪಿ, ಜ.12: ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಖಾಲಿ ಇರುವ ‘ಡಿ’ ಗ್ರೂಪ್ (ಪೌರ ಕಾರ್ಮಿಕರು/ ಲೋಡರ್ಸ್) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಸ್ಥಳ ನಿಯುಕ್ತಿ ಮಾಡಿ 49 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾ ಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ.

ರಾಜ್ಯದಲ್ಲಿ ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಿರುವುದರಲ್ಲಿ ಉಡುಪಿ ಜಿಲ್ಲೆ ಪ್ರಥಮ ಎಂದು ಹೇಳಲಾಗಿದೆ. ಹೀಗೆ ಆಯ್ಕೆಯಾಗಿರುವ 49 ಅಭ್ಯರ್ಥಿಗಳ ಪೈಕಿ 41 ಮಂದಿ ಸ್ಥಳೀಯರು ಮತ್ತು 7 ಮಂದಿ ಬೇರೆ ಜಿಲ್ಲೆಗಳಿಂದ ಹಾಜರಾಗಿದ್ದರು. ಒಬ್ಬರು ಮಾತ್ರ ಅನಾರೋಗ್ಯದ ಕಾರಣ ಗೈರುಹಾಜರಾಗಿದ್ದರು.

ಹಾಜರಿದ್ದ 48 ಅಭ್ಯರ್ಥಿಗಳ ಪೈಕಿ ಉಡುಪಿ ನಗರಸಭೆಗೆ 29 ಮಂದಿ, ಕಾರ್ಕಳ ಪುರಸಭೆಗೆ 2, ಕುಂದಾಪುರ ಪುರಸಭೆಗೆ 6 ಮಂದಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ 11 ಮಂದಿಯನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News