ಬೇಡಿಕೆ ಈಡೇರಿಕೆಗೆ ಆಗ್ರಹ: ಸರಕಾರಿ ನೌಕರರ ಮುಷ್ಕರ

Update: 2016-01-12 18:57 GMT

ಕಾಸರಗೋಡು, ಜ.12: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬೆಂಬಲಿತ ಸರಕಾರಿ ನೌಕರರು ಮಂಗಳವಾರ ಜಿಲ್ಲೆಯಲ್ಲಿ ಮುಷ್ಕರ ನಡೆಸಿದರು. ಇದರಿಂದ ಸರಕಾರಿ ಕಚೇರಿ ಮತ್ತು ಶಾಲೆಗಳಲ್ಲಿ ಹಾಜರಾತಿ ವಿರಳವಾಗಿತ್ತು.

ಜಿಲ್ಲಾಕಾರಿ ಕಚೇರಿ ಹೊಂದಿರುವ ಕಾಸರಗೋಡು ಸಿವಿಲ್ ಸ್ಟೇಶನ್, ತಾಲೂಕು ಕಚೇರಿ ಮೊದಲಾ ದೆಡೆಗಳಲ್ಲಿ ಹಾಜರಾತಿ ಕಡಿಮೆ ಇತ್ತು. ನೌಕರರ ಮುಖ್ಯ ಸ್ಥರದಿಂದ ಸರಕಾರಿ ಕಚೇರಿಗಳ ದೈನಂದಿನ ಚಟುವಟಿಕೆ ಅಸ್ತವ್ಯಸ್ಥಗೊಂಡಿತ್ತು. ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾಪ ಕೈಬಿಡಬೇಕು, ಶ್ರೀಘ್ರವೇ ವೇತನ ಪರಿಷ್ಕರಿಸಬೇಕು,ಬೆಲೆಯೇರಿಕೆ ತಡೆಗೆ ಕ್ರಮ ಕೈಗೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News