ಜ.17: ಫಾದರ್ ಮುಲ್ಲರ್’ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳು
ಮಂಗಳೂರು, ಜ.12: ನಗರದ ಫಾದರ್ ಮುಲ್ಲರ್ ಮೆಡಿ ಕಲ್ ಕಾಲೇಜು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್‌ನ ದಕ್ಷಿಣ ಭಾರತ ಘಟಕದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸೈಕೋ ಫಾರ್ಮಿನರ್-2016 ಮತ್ತು ರಾಷ್ಟ್ರ ಮಟ್ಟದ ಬಯೋ ಎಥಿಕ್ಸ್ ಸ್ಕಿಟ್ ಸ್ಪರ್ಧೆ ಜ.17ರಂದು ಫಾ. ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಜರಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಘಟಕದ ಮುಖ್ಯಸ್ಥೆ ಡಾ.ಪ್ರಿನ್ಸಿ ಲೂಯಿಸ್ ಪಾಲಟ್ಟಿ, ಅಂದು ಬೆಳಗ್ಗೆ 9:45ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸೈಕೊ ಫಾರ್ಮಾಕಾಲಜಿ ಬಗ್ಗೆ ಅರಿವು ಬೆಳೆಸಿಕೊಳ್ಳುವ ಸಲು ವಾಗಿ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ ಎಂದರು. ಸ್ನಾತಕೋತ್ತರ ಪದವೀಧರರಿಗೆ ರಸಪ್ರಶ್ನೆ, ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಪೇಪರ್ ಪ್ರೆಸೆಂಟೇಶನ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಅಂತಾರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಸೈಕೋಫಾರ್ಮಿನಾರ್ ಸಂಯೋಜಕ ಅಧ್ಯಕ್ಷೆ ಡಾ. ವಿಜಯಲಕ್ಷ್ಮೀ ಎಂ.ಕೆ., ಬಯೋ ಎಥಿಕ್ಸ್ ಅಪ್‌ಡೇಟ್‌ನ ಸಂಯೋಜಕ ಕಾರ್ಯದರ್ಶಿ ಡಾ.ರೇಖಾ ಬಿ., ಪ್ರೊ. ಆಗ್ನೆಸ್, ಶಾಜನ್ ಕ್ಸೇವಿಯರ್ ಉಪಸ್ಥಿತರಿದ್ದರು.