×
Ad

ಜ.15ರಿಂದ ಎಸ್‌ವೈಎಸ್ ಲಾಹ್‌ನ ವಾರ್ಷಿಕೋತ್ಸವ

Update: 2016-01-13 10:50 IST

ಮಂಗಳೂರು, ಜ. 13: ಕುತ್ತಾರು ಮದನಿ ನಗರ ಎಸ್‌ವೈಎಸ್ ಲಾಹ್‌ನ 23ನೇ ವಾರ್ಷಿಕೋತ್ಸವ ಜ. 15ರಿಂದ 22ರ ತನಕ ಮದನಿ ನಗರದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎ. ಎ. ಹೈದರ್ ಪರ್ತಿಪ್ಪಾಡಿ ತಿಳಿಸಿದ್ದಾರೆ.
 

 15ರಂದು ಉದ್ಘಾಟನಾ ಸಮಾರಂಭ ಹಾಗೂ ಬುರ್ದಾ ಮಜ್ಲಿಸ್‌ನ ನೇತೃತ್ವವನ್ನು ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ವಹಿಸಲಿದ್ದಾರೆ. ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಯು.ಎಸ್. ಹಂಝ ಅಧ್ಯಕ್ಷತೆ ವಹಿಸಲಿದ್ದಾರೆ. ಮದನಿ ನಗರ ಜುಮಾ ಮಸೀದಿ ಖತೀಬ್ ಸಯ್ಯಿದ್ ಶರುದ್ದೀನ್ ಸಖಾಫಿ ಅಲ್-ಹಾದಿ ತಂಞಳ್ ಉದ್ಘಾಟಿಸಲಿದ್ದಾರೆ.

ಅನಂತರ ನಿಝಾರ್ ಕುತುಬಿ ಮಡವೂರು ನೇತೃತ್ವದ ಖುತುಬುಲ್ ಆಲಂ ಬುರ್ದಾ ಇಖ್ವಾನ್ ಮಡವೂರು ತಂಡದಿಂದ ಬುರ್ದಾ ಮಜ್ಲಿಸ್ ಜರಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16ರಂದು ಮುಹಮ್ಮದ್ ಅಶ್ರಫ್ ಸಅದಿ ಮತ್ತು ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರರವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. 17ರಂದು ಸುನ್ನಿ ಸಮಾವೇಶ ನಡೆಯಲಿದ್ದು, ದ.ಕ. ಜಿಲ್ಲಾ ಸಂಯುಕ್ತ ಜಮಾಅತ್‌ನ ಖಾಝಿ ಅಸ್ಸಯ್ಯಿದ್ ಝಲ್ ಕೋಯಮ್ಮ ತಂಳ್ ಕೂರತ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಅಖಿಲ ಭಾರತ ಸುನ್ನೀ ಜಂಇಯತುಲ್ ಉಲಮಾದ ಪ್ರ.ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಮತ್ತು ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News