ಕಾಸರಗೋಡು : ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ
ಕಾಸರಗೋಡು : ಕಯ್ಯಾರು ಕ್ರಿಸ್ತರಾಜ ದೇವಾಲಯದ ೮೧ ನೇ ವಾರ್ಷಿಕ ಮಹೋತ್ಸವವು ಬುಧವಾರ ನಡೆಯಿತು. ಬೆಳಿಗ್ಗೆ ಪವಿತ್ರ ಮೊಂಬತ್ತಿ ಯನ್ನು ಕಾಸರಗೋಡು ವಲಯ ವಿಕಾರ್ ವಾರ್ ವಂ. ವಿನ್ಸೆಂಟ್ ಡಿ ಸೋಜ ವಿತರಿಸಿದರು.
ಬಳಿಕ ನಡೆದ ದಿವ್ಯಬಲಿ ಪೂಜೆಯನ್ನು ವರ್ಕಾಡಿ ಸೆಕ್ರಟ್ ಹಾರ್ಟ್ ಆಫ್ ಜೀಸಸ್ ಚರ್ಚ್ ನ ಧರ್ಮಗುರು ವಂ. ಫ್ರಾನ್ಸಿಸ್ ರೋಡ್ರಿಗಸ್ ನೆರವೇರಿಸಿ ಆಶೀರ್ವಚನ ನೀಡಿದರು.
ಕಾಸರಗೋಡು ವಲಯದ ವಿಕಾರ್ ವಾರ್ ಹಾಗೂ ಬೇಳ ಶೋಕಮಾತಾ ದೇವಾಲಯದ ಧರ್ಮಗುರು ವಂ. ವಿನ್ಸೆಂಟ್ ಡಿ ಸೋಜ , ಕೊಲ್ಲಂಗಾನ ಚರ್ಚ್ ನ ವಂ. ಡೇನಿಯಲ್ ಡಿ ಸೋಜ , ಮಣಿಯ೦ಪಾರೆ ಚರ್ಚ್ ನ ಪೀಟರ್ ಫೆರ್ನಾಂಡಿಸ್ , ಕಾಸರಗೋಡು ಚರ್ಚ್ ನ ವಂ. ನವೀನ್ ಪ್ರಕಾಶ್ ಡಿ ಸೋಜ , ಕುಂಬಳೆ ಚರ್ಚ್ ನ ವಂ . ಮಾರ್ಸೆಲ್ ಸಲ್ದಾನ, ತಲಪಾಡಿ ಚರ್ಚ್ ನ ವಂ. ನೆಲ್ಸನ್ ಒಲಿವೆರಾ , ಪಾವೂರು ಚರ್ಚ್ ನ ಆಲೋಶಿಯಾಸ್ ಸಾಂಟಿಯಾಗೋ , ಮಂಜೇಶ್ವರ ಚರ್ಚ್ ನ ವಲೇರಿಯನ್ ಲೂವಿಸ್ , ಮೀಯಪದವು ಚರ್ಚ್ ನ ಆನಿಲ್ ಜೋಯಲ್ ಡಿ ಸೋಜ , ಉಕ್ಕಿನಡ್ಕ ಚರ್ಚ್ ನ ಸ್ಟಾನಿಸ್ಲಸ್ ಡಿಸೋಜ ಹಾಗೂ ಇನ್ನಿತರ ಧರ್ಮಗುರುಗಳು ಉಪಸ್ಥಿತರಿದ್ದರು .
ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ. ವಿಕ್ಟರ್ ಡಿಸೋಜ ನೇತ್ರತ್ವ ನೀಡಿದರು.
ಆದಿತ್ಯವಾರ ಸಂಭ್ರಮದ ಪರಮಪ್ರಸಾದದ ಮೆರವಣಿಗೆ ನಡೆಯಿತು. ರಾಣಿಪುರ ರಿಷಿವನ ಧ್ಯಾನ ಕೇಂದ್ರದ ಸಹಾಯಕ ಧರ್ಮಗುರು ವಂ . ಪ್ರದೀಪ್ ಪಿಂಟೋ ಬಲಿ ಪೂಜೆ ನೆರವೇರಿಸಿದರು.