ಮಂಜೇಶ್ವರ : ಕಳವುಗೈದ ಬೈಕ್ ಸಹಿತ ಯುವಕನ ಬಂಧನ
Update: 2016-01-13 17:26 IST
ಮಂಜೇಶ್ವರ : ಕಳವುಗೈದ ಬೈಕ್ ಸಹಿತ ಯುವಕನೋರ್ವನನ್ನು ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ. ತಂಡದ ನಾಲ್ವರಿಗಾಗಿ ಪೋಲಿಸರು ಶೋಧ ಮುಂದುವರಿಸಿದ್ದಾರೆ. ಬಂಧಿತನನ್ನು ಪಾವೂರು ಕೋಡಿಯ ಮೊಹಮ್ಮದ್ ಹನೀಫ್(28) ಎಂದು ಗುರುತಿಸಲಾಗಿದೆ. ಈತನನ್ನು ಮಂಜೇಶ್ವರ ಎಸ್.ಐ ಪ್ರಮೋದ್ ನೇತೃತ್ವದ ಪೋಲೀಸರು ಬಂಧಿಸಿದ್ದಾರೆ. ವರ್ಕಾಡಿ ಬಳಿ ಶಂಕಾಸ್ಪದ ರೀತಿಯಲ್ಲಿ ಕಂಡು ಬಂದ ಈತನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಂದ ವಶಪಡಿಸಿಕೊಂಡ ಬೈಕ್ ಕಳವುಗೈದ ಬೈಕೊಂದು ತನಿಖೆ ವೇಳೆ ಆರೋಪಿ ಹೇಳಿದ್ದು ಪ್ರಕರಣದಲ್ಲಿ ಇನ್ನೂ ನಾಲ್ವರಿರುವ ಬಗ್ಗೆ ಆರೋಪಿ ಹೇಳಿದ್ದಾನೆ. 6 ತಿಂಗಳ ಹಿಂದೆ ಗಾಂಜಾ ಸಾಗಾಟ ಪ್ರಕರಣದಲ್ಲಿ ಈತ ಬಂಧಿತನಾಗಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗುವ್ಯದೆಂದು ಪೋಲೀಸರು ತಿಳಿಸಿದ್ದಾರೆ.