×
Ad

ನಮ್ಮ ಆಲೋಚನೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ - ಚಿಂತಕ ವಾಗ್ಮಿ ಉಮೇಶ್

Update: 2016-01-13 18:40 IST

ಕಟೀಲು, ಜ.13: ನಮ್ಮ ಆಲೋಚನೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ.  ಸ್ವಾಮಿ ವಿವೇಕಾನಂದರ ತತ್ವ, ಸೈದ್ದಾಂತಿಕ ಚಿಂತನೆ, ವಿಚಾರಧಾರೆಗಳನ್ನು ಅನಾವರಣಗೊಳಿಸುವಲ್ಲಿ ಗಮನ ಹರಿಸಬೇಕು ಎಂದು ಚಿಂತಕ ವಾಗ್ಮಿ ಉಮೇಶ್ ಹೇಳಿದರು.

 ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭ ಶಿಕ್ಷಕ-ಶಿಕ್ಷಕೇತರ ಸಂಘದ ಡಾ.ಕೇಶವ ಹೆಗ್ಡೆ, ವಿದ್ಯಾರ್ಥಿ ನಾಯಕ ಶ್ರೀಕರ ಆಸ್ರಣ್ಣ ಉಪಸ್ಥಿತರಿದ್ದರು.

ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜಾ ಪ್ರಸ್ತಾವನೆ ಗೈದು ಸ್ವಾಗತಿಸಿದರು. ಉಪನ್ಯಾಸಕ ಶಂಕರ ಮರಾಠೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News