ಕೊಟ್ಟಾರ ಚೌಕಿ : ಸ್ಕಾರ್ಪಿಯೊ ಪಲ್ಟಿ: ಮೂವರಿಗೆ ಗಾಯ
Update: 2016-01-13 22:52 IST
ಸ್ಕಾರ್ಪಿಯೊ ಪಲ್ಟಿ: ಮೂವರಿಗೆ ಗಾಯ
ಮಂಗಳೂರು, ಜ. 13: ಎಂಟು ಮಂದಿ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೊ ವಾಹನವೊಂದು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿರುವ ಘಟನೆ ಇಂದು ಸಂಜೆ ಕೊಟ್ಟಾರ ಚೌಕಿ ಬಳಿ ನಡೆದಿದೆ.
ಸ್ಕಾರ್ಪಿಯೊ ವಾಹನ ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸುರತ್ಕಲ್ ಕಡೆಗೆ ಸಂಚರಿಸುತ್ತಿದ್ದು, ಕೊಟ್ಟಾರ ಚೌಕಿ ಬಳಿ ಹೆದ್ದಾರಿ ಬದಿ ನಿಂತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಸ್ಕಾರ್ಪಿಯೊ ಪಲ್ಟಿ ಹೊಡೆದಿದೆ. ಸ್ಕಾರ್ಪಿಯೊದಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸಹಿತ ಮೂವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಸ್ಕಾರ್ಪಿಯೋ ವಾಹನ ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.