×
Ad

ಚುಟುಕು ಸುದ್ದಿಗಳು

Update: 2016-01-13 23:35 IST


ನಾಳೆ ಪಣಂಬೂರು ಸಂಕ್ರಾಂತಿ ಉತ್ಸವ
 ಮಂಗಳೂರು, ಜ.13: ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಸ್ಥಾನದ ಆಶ್ರಯದಲಿ ್ಲಯಕ್ಷಗಾನ ಕಲಾ ಮಂಡಳಿ, ಪಣಂಬೂರು ರೋಟರಿ ಕ್ಲಬ್ ಪೋರ್ಟ್ ಟೌನ್ ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷನಂದನದ ವತಿಯಿಂದ ಪಣಂಬೂರು ಸಂಕ್ರಾಂತಿ ಉತ್ಸವ- 2016 ಜ.15ರಂದು ನಡೆಯಲಿದೆ ಎಂದು ಯಕ್ಷನಂದನದ ಸಂಚಾಲಕ ಪಿ.ಸಂತೋಷ್ ಐತಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 8:30ರಿಂದ ಚಿತ್ರ ರಚನೆ ಸ್ಪರ್ಧೆ ನಡೆಯಲಿದ್ದು,, ಅಂಗನವಾಡಿಯ ಮಕ್ಕಳಿಗೆ ಸ್ವ-ಇಚ್ಛೆಯ ಚಿತ್ರ ರಚನೆ, ಕಿರಿಯ ವಿದ್ಯಾರ್ಥಿಗಳಿಗೆ-ಬಲಿ ಮೂರ್ತಿ, ಹಿರಿಯ ವಿದ್ಯಾರ್ಥಿಗಳಿಗೆ- ಕುಂಭಕರ್ಣ ಶಯನ, ಪ್ರೌಢವಿದ್ಯಾರ್ಥಿಗಳಿಗೆ- ಅಶೋಕವನ ಧ್ವಂಸ ವಿಷಯವನ್ನು ನೀಡಲಾಗುತ್ತದೆ. ಪ್ರಾಥಮಿಕ, ಪ್ರೌಢ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಜರಗಲಿದೆ. ಅಂಗನವಾಡಿ, ಕಿರಿಯ ಹಾಗೂ ಹಿರಿಯ ಪ್ರೌಢಶಾಲಾ ವಿಭಾಗದಲ್ಲಿ ಪೌರಾಣಿಕ ವೇಷ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಸಾರ್ವಜನಿಕ ವಿಭಾಗದಲ್ಲಿ ಆಶು ಭಾಷಣ ಸ್ಪರ್ಧೆಯೂ ನಡೆಯಲಿದೆ ಎಂದವರು ತಿಳಿಸಿದರು.
ಸಂಕ್ರಾಂತಿ ಉತ್ಸವವನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ವಾಸುದೇವ ಆಸ್ರಣ್ಣ ಉದ್ಘಾಟಿಸುವರು. ಉತ್ಸವದ ಸಮಾರೋಪದ ಅಧ್ಯಕ್ಷತೆಯನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಂಚಾಲಕ ರವೀಶ ಕುಮಾರ್ ವಹಿಸುವರು ಎಂದವರು ತಿಳಿಸಿದರು.ಡಾ.ಪಿ.ಸತ್ಯಮೂರ್ತಿ ಐತಾಳ್, ರವಿ ಅಲೆವೂರಾಯ, ಶಂಕರನಾರಾಯಣ ಮೈರ್ಪಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇಂದು ಬ್ರಹ್ಮಕಲಶೋತ್ಸವ
ಮಂಗಳೂರು, ಜ.13: ಬಂಟ್ವಾಳ ತಾಲೂಕಿನ ಇರಾ ಪರಪ್ಪು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ.14ರಿಂದ 17ರವರೆಗೆ ನಡೆಯಲಿದೆ ಎಂದು ಪುರುಷೋತ್ತಮ ಅಂಚನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದಿನಿಂದ ಕಥಾ ಕೀರ್ತನ ಮಂಗಳೂರು, ಜ.13: ಶ್ರೀ ಶರವು ಮಹಾಗಣಪತಿ ದೇವಸ್ಥಾನ ಮಂಗಳೂರು ಹಾಗೂ ಹರಿಕಥಾ ಪರಿಷತ್ ಮಂಗಳೂರು ವತಿಯಿಂದ 60 ಕಥಾ ಕೀರ್ತನ ಸಪ್ತಾಹ ಸರಣಿ ಕಾರ್ಯಕ್ರಮವು ಜ.14ರಿಂದ ಜ.20ರವರೆಗೆ ಶರವು ಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.17-18: ರಾತೀಬ್ ಕಾರ್ಯಕ್ರಮ
ವಿಟ್ಲ, ಜ.13: ಮರ್‌ಹೂಂ ಶೈಖುನಾ ಸುರಿಬೈಲ್ ಉಸ್ತಾದ್‌ರ 14ನೆ ಆಂಡ್ ನೇರ್ಚೆ ಹಾಗೂ ಜಲಾಲಿಯ್ಯ ರಾತೀಬ್ ಕಾರ್ಯಕ್ರಮವು ಸುರಿಬೈಲು ದಾರುಲ್ ಅಶ್-ಅರಿಯ್ಯ ಸಭಾಂಗಣದಲ್ಲಿ ಜ.17 ಮತ್ತು 18ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಇಂದು ‘ಬಯಲು ಸೂರ್ಯ ಆಲಯ’ ಉದ್ಘಾಟನೆ
ಸುಳ್ಯ, ಜ.13: ಸುಳ್ಯ ಸ್ನೇಹ ಶಾಲೆಯ ವಿಂಶತಿ ಉತ್ಸವದ ಸವಿನೆನಪಿಗಾಗಿ ಸ್ಥಾಪಿಸಲಾದ ಧ್ಯಾನ ಮತ್ತು ಯೋಗ ಕೇಂದ್ರ ‘ಬಯಲು ಸೂರ್ಯ ಆಲಯ’ದ ಉದ್ಘಾಟನೆ ಜ.14ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ತಿಳಿಸಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಯೋಗ ಕೇಂದ್ರವನ್ನು ಉದ್ಘಾಟಿಸುವರು ಎಂದವರು ವಿವರಿಸಿದರು.


ಜ.16: ಕೆವಿಜಿ ಪ್ರೌಢಶಾಲೆಯ ಬೆಳ್ಳಿಹಬ್ಬ 
ಸುಳ್ಯ, ಜ.13: ಸುಳ್ಯದ ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬೆಳ್ಳಿಹಬ್ಬ ಸಮಾರಂಭವು ಜ.16ರಂದು ಅಮರಶ್ರೀ ಬಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕಾಡಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದವರು ವಿವರಿಸಿದರು.

ನೆಲ್ಲಿಗುಡ್ಡೆ: ಮೀಲಾದ್ ಕಾರ್ಯಕ್ರಮ
 ಮಂಗಳೂರು, ಜ.13: ನೆಲ್ಲಿಗುಡ್ಡೆ ನೂರುಲ್ ಹುದಾ ಜಮಾಅತ್ ವತಿಯಿಂದ ಮೀಲಾದ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮದ್ರಸದ ಸದ್‌ರ್ ಮುಅಲ್ಲಿಂ ಡಿ.ಎ. ಅಬ್ಬಾಸ್ ಮುಸ್ಲಿಯಾರ್ ಪಡಿಕ್ಕಲ್ ಕಾರ್ಯಕ್ರಮ ಉದ್ಘಾಟಿಸಿದರು. ಖತೀಬ್ ಮುಹಮ್ಮದ್ ಮುಸ್ಲಿಯಾರ್ ಕೋಡಪದವು ಅಧ್ಯಕ್ಷತೆ ವಹಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಮಾಅತ್ ಅಧ್ಯಕ್ಷ ಅಬೂಬಕರ್, ಕೋಶಾಧಿಕಾರಿ ಇಸ್ಮಾಯೀಲ್ ಸೌತ್ ಇಂಡಿಯಾ, ಮಾಜಿ ಅಧ್ಯಕ್ಷ ಯೂನುಸ್ ಸಾಹೇಬ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಕೊಪ್ಪಲ, ಉಮರ್ ಮುಸ್ಲಿಯಾರ್ ಮೊದ ಲಾದವರು ಉಪಸ್ಥಿತರಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಟ್ಟೆ ಸ್ವಾಗತಿಸಿದರು. ಸಿದ್ದೀಕ್ ನೆಲ್ಲಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ನಾಳೆ ಸಾಮೂಹಿಕ ಸೀಯಾಳ ಸಮರ್ಪಣೆ
ಉಡುಪಿ, ಜ.13: ಉಡುಪಿಯ ಶ್ರೀ ಅನಂತೇಶ್ವರ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ.15ರಂದು ಸಂಜೆ 5ಕ್ಕೆ ಸಾಮೂಹಿಕ ಸೀಯಾಳ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಜ.16: ವಿವೇಕಾನಂದ ಜಯಂತಿ ಆಚರಣೆ
 ಮುಲ್ಕಿ, ಜ.13: ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವಿವೇಕಾನಂದ ಜಯಂತಿ ಅಂಗವಾಗಿ ಕಾಯಕರತ್ನ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮವು ಜ.16ರಂದು ಸಂಜೆ 6ಕ್ಕೆ ಮುಲ್ಕಿ ಕಾರ್ನಾಡು ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ತಿಳಿಸಿದ್ದಾರೆ.
ಸಂಸದ ನಳಿನ್‌ಕುಮಾರ್ ಕಟೀಲು ಕಾರ್ಯ ಕ್ರಮ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಗ್ರಾಮ ಸಂಪರ್ಕ ಕಾರ್ಯಕ್ರಮ
ಉಡುಪಿ, ಜ.13: ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮ ಕಾರ್ಕಳ ತಾಲೂಕಿನ ಪಡುಕುಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಣೇಶ್ ಕುಮಾರ್ ಗಂಗೊಳ್ಳಿ ಮತ್ತು ಬಳಗ ಸಂಗೀತದ ಮೂಲಕ ಹಾಗೂ ಚಿಕ್ಕಮಗಳೂರಿನ ತೊಗಲು ಗೊಂಬೆ ಕಲಾತಂಡದ ಸದಸ್ಯರಿಂದ ತೊಗಲುಗೊಂಬೆ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಡೊರಿಕ್ ಸಿಕ್ವೇರ, ಸತೀಶ್ ಶೇಟ್ ಉಪಸ್ಥಿತರಿದ್ದರು.

ಅರ್ಜಿಗಳ ಆಹ್ವಾನ
 ಉಡುಪಿ, ಜ.13: ಕಾರ್ಕಳ ತಾಲೂ ಕಿನ ನಲ್ಲೂರು ಗ್ರಾಮದ ಕಳತ್ರಪಾದೆ ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೆ ತರಗತಿ ತೇರ್ಗ ಡೆಯಾದ 18ರಿಂದ 44 ವಯೋಮಿತಿಯ ಅದೇ ಗ್ರಾಮದಲ್ಲಿ ವಾಸ್ತವ್ಯವಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜ.27ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News