ಲುಮಿನಸ್ ಮದೀನಾ-16 ಮೀಲಾದ್ ಕಾರ್ಯಕ್ರಮ ಸಮಾಪ್ತಿ
ನರಿಂಗಾನ, ಜ.13: ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಆಶ್ರಯದಲ್ಲಿ ನಡೆದ ಲುಮಿನಸ್ ಮದೀನಾ-16 ಮೀಲಾದ್ ಗ್ರಾಂಡಿಯರ್ ಸಮಾಪ್ತಿಗೊಂಡಿತು. ಅಲ್ ಮದೀನ ಯತೀಂಖಾನ, ನಿರ್ಗತಿಕ ಮಂದಿರ, ಹಿಫ್ಲುಲ್ ಕುರ್‌ಆನ್ ಕಾಲೇಜು ಮತ್ತು ನಾರ್ತ್ ಕರ್ನಾಟಕ ಹೋಂ ಸಂಸ್ಥೆಗಳಿಂದ ಆಯ್ದ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಯಾಕೂತ್ ತಂಡ ಪ್ರಥಮ, ಮರ್ಜಾನ್ ದ್ವಿತೀಯ ಹಾಗೂ ಲುಅ್ ಲುಅ್ ತಂಡ ತೃತೀಯ ಸ್ಥಾನ ಗಳಿಸಿತು. ಸೀನಿಯರ್ ವಿಭಾಗದಲ್ಲಿ ಫವೀಝ್ ಬಾಳೆಹೊನ್ನೂರು, ಜೂನಿಯರ್ ವಿಭಾಗದಲ್ಲಿ ಶಫೀಕ್ ಈಶ್ವರಮಂಗಲ ಕಲಾ ಪ್ರತಿಭೆಗಳಾಗಿ ಆಯ್ಕೆಯಾದರು.
ಸಮಾರೋಪ ಕಾರ್ಯಕ್ರಮದಲ್ಲಿ ಅಲ್ ಮದೀನಾದ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಕುಂಞಿ ಅಮ್ಜದಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಹಾಗೂ ಕನ್ವೀನರ್ ಖಲೀಲ್ ಝೈನಿ ಕಾರ್ಯಕ್ರಮ ಸಂಯೋಜಿಸಿದರು.
ಅಧ್ಯಕ್ಷ ಹಾಫಿಳ್ ಮುರ್ಷಿದ್ ಹುಮೈದಿ ಸ್ವಾಗ ತಿಸಿದರು. ಶಿಕ್ಷಕ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಅಝೀಝ್ ಅಹ್ಸನಿ, ಸಿದ್ದೀಕ್ ಅಹ್ಸನಿ, ಹೈದರ್ ಸಖಾಫಿ, ಅಬ್ದುಲ್ ಖಾದರ್ ಝುಹ್ರಿ, ಇರ್ಶಾದ್ ಮದನಿ, ಇಬ್ರಾಹೀಂ ಮದನಿ, ಹಝ್ರತ್ ಮುಹಮ್ಮದ್ ಅಬ್ರಾರ್ ಅಶ್ರಫಿ ಅತಿಥಿಗಳಾಗಿ ಭಾಗವಹಿಸಿದ್ದರು.