×
Ad

ಧರ್ಮಸ್ಥಳ: ನೂತನ ವಸತಿ ನಿಲಯ ಉದ್ಘಾಟನೆ

Update: 2016-01-13 23:42 IST

ಬೆಳ್ತಂಗಡಿ, ಜ.13: ಪರಿಶಿಷ್ಟ ವರ್ಗ ಗಳ ಕಲ್ಯಾಣ ಇಲಾಖೆ ದ.ಕ. ಜಿಪಂ, ತಾಪಂ ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ದ.ಕ. ನಿರ್ಮಿತಿ ಕೇಂದ್ರ ಸಂಯುಕ್ತ ಆಶ್ರಯ ದಲ್ಲಿ ಧಮಸ್ಥಳದ ಪರಿಶಿಷ್ಟ ವರ್ಗದ ಆಶ್ರಮ ಶಾಲೆಯ ವಸತಿ ನಿಲಯದ ನೂತನ ಕಟ್ಟಡವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಶಾಸಕ ಕೆ.ವಸಂತ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಉಪಾಧ್ಯಕ್ಷ ವಿಷ್ಣು ಮರಾಠೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಾ ಚಂದ್ರಶೇಖರ್, ಸದಸ್ಯ ಕೇಶವ ಎಂ., ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಅಚ್ಯುತ ಪೂಜಾರಿ, ಸಹಾಯಕ ಸಮಾಜ ಕಲ್ಯಾಣ ಇಲಾಖಾಧಿಕಾರಿ ಮೋಹನಕುಮಾರ್ ಉಪಸ್ಥಿತ ರಿದ್ದರು. ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಎಂಜಿನಿಯರ್ ನವೀನ್, ಗುತ್ತಿಗೆದಾರ ಪ್ರಶಾಂತ ಎಂ. ಇವರನ್ನು ಗೌರವಿಸಲಾಯಿತು. ಅಜಿತ್‌ಕುಮಾರ್ ಕೌಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲಾತಾ ಎಂ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News