ಪರಸ್ಪರರನ್ನು ಅರಿತರೆ ಅಪನಂಬಿಕೆ ದೂರ: ಹೊಸಮಾರು ಶ್ರೀ
Update: 2016-01-13 23:43 IST
ಉಡುಪಿ, ಜ.13: ಎಲ್ಲ ಧರ್ಮೀಯರೊಂದಿಗೆ ಬೆರೆತು ಬಾಳುವವರು ನಾವಾಗಬೇಕು. ಅಗತ್ಯ ವಿಲ್ಲದ ವಿಚಾರಗಳಲ್ಲಿ ಆಸಕ್ತಿ ವಹಿಸುವುದರ ಪರಿಣಾಮವಾಗಿ ಸಮಾಜದಲ್ಲಿ ಅಪನಂಬಿಕೆ ಗಳು ಹೆಚ್ಚುತ್ತಿವೆ. ಪರಸ್ಪರರನ್ನು ಅರಿತುಕೊಳ್ಳುವ ಕೆಲಸ ಆಗಬೇಕು ಎಂದು ಹೊಸಮಾರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಹೂಡೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಸೀರತ್ ಸೌಹಾರ್ದ ಕೂಟವನ್ನುದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರು ಶಾಂತಿ ಪ್ರಕಾಶನದ ವ್ಯವ ಸ್ಥಾಪಕ ಮುಹಮ್ಮದ್ ಕುಂಞಿ, ಉದ್ಯಮಿ ಲಕ್ಷ್ಮಣ್ ಅಮೀನ್ ಮಾತನಾಡಿದರು. ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ವಹಿಸಿದ್ದರು. ಅಬ್ದುಲ್ ಖಾದಿರ್ ಮೊಯ್ದಿನ್ ಸ್ವಾಗತಿ ಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.