ಸೂರ್ಯ ನವೀಕೃತ ಮದ್ರಸ ಉದ್ಘಾಟನೆ
ಪುತ್ತೂರು, ಜ.13: ನೂರುಲ್ ಇಸ್ಲಾಂ ಸುನ್ನಿ ಮದ್ರಸದ ನವೀಕೃತ ಕಟ್ಟಡದ ಉದ್ಘಾಟನೆ, ಸೌಹಾರ್ದ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇಡ್ಕಿದು ಗ್ರಾಮದ ಸೂರ್ಯ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು. ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಮಸೀದಿಯ ಗೌರವಾಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ಸೌಹಾರ್ದ ಸಂಗಮವನ್ನು ಕ್ಯಾಂಪ್ಕೊ ನಿರ್ದೇಶಕ ಪದ್ಮನಾಭ ಭಟ್ ಕೊಂಕೋಡಿ ಉದ್ಘಾಟಿಸಿದರು. ಇಸ್ಮಾಯೀಲ್ ಮುಸ್ಲಿಯಾರ್ ಕಂಕನಾಡಿ, ಇಸ್ಹಾಕ್ ಫೈಝಿ ಉಚ್ಚಿಲ, ಪತ್ರಕರ್ತ ಹಮೀದ್ ಕಂದಕ್, ಸುಬ್ರಾಯ ಭಟ್ ಕೊಂಕೋಡಿ, ಇಡ್ಕಿದು ಗ್ರಾಪಂ ಉಪಾಧ್ಯಕ್ಷ ಸುಧೀರ್, ಹನೀಫ್ ಬಗ್ಗುಮೂಲೆ ಮಾತನಾಡಿದರು.
ಇರ್ಶಾದ್ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಶರೀಫ್ ಸಅದಿ ಕಿಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭ ನೂತನ ಮದ್ರಸವನ್ನು ಕಟ್ಟಿಸಿಕೊಟ್ಟ ಅಲ್ ಇಸ್ಲಾಮಿಯ್ಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಉಚ್ಚಿಲ, ಉಡುಪಿ ಮತ್ತು ದುಬೈ ಘಟಕದ ಪದಾಧಿ ಕಾರಿಗಳಾದ ತನ್ವೀರ್ ಅಹ್ಮದ್ ಉಚ್ಚಿಲ, ಅಬ್ದುರ್ರಝಾಕ್ ಉಚ್ಚಿಲ, ರಫೀಕ್ ಉಚ್ಚಿಲ, ಶಬೀರ್ ಇಸ್ಮಾಯೀಲ್ ಉಚ್ಚಿಲ, ಅಬೂಬಕರ್ ಮದನಿ, ಅಬ್ದುರ್ರಝಾಕ್ ಸಅದಿ, ಮಸೀದಿ ಅಧ್ಯಕ್ಷ ಅಬೂಬಕರ್‌ರನ್ನು ಸನ್ಮಾನಿಸಲಾಯಿತು.
ಸೈಯದ್ ಹಂಝ ತಂಙಳ್ ಪಾಟ್ರಕೋಡಿ, ಮುಹಮ್ಮದ್ ತಂಙಳ್ ಕಬಕ, ಖತೀಬ್ ಹನೀಫ್ ಸಖಾಫಿ, ಹನೀಫ್ ಸಅದಿ, ಅಬ್ದುರ್ರಹ್ಮಾನ್ ಸಅದಿ ಕೋಲ್ಪೆ, ಅಬ್ದುಲ್ ಹಮೀದ್ ಕೋಲ್ಪೆ, ಮಿತ್ತೂರು ಖತೀಬ್ ಆಸಿಫ್ ಝುಹರಿ, ಖಾಸಿಂ ಹಾಜಿ ಮಿತ್ತೂರು, ಸತೀಶ್, ಸುರೇಶ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಹಮ್ಮದ್ ರಫೀಕ್ ಸಅದಿ ಬಡಜ ಸ್ವಾಗತಿಸಿದರು.