×
Ad

ಉಡುಪಿ ಜಿಲ್ಲಾ ನಾಟಕೋತ್ಸವದ ಸಮಾರೋಪ

Update: 2016-01-13 23:48 IST


ಉಡುಪಿ, ಜ.13: ಕರ್ನಾಟಕ ನಾಟಕ ಅಕಾಡಮಿಯು ಉಡುಪಿ ರಂಗಭೂಮಿಯ ಸಹಯೋಗದೊಂದಿಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪ ದಲ್ಲಿ ನಡೆದ ಉಡುಪಿ ಜಿಲ್ಲಾ ನಾಟಕೋತ್ಸವದ ಸಮಾ ರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಸಾಣೆಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
 ರಂಗಕರ್ಮಿಗಳಾದ ಚಂದ್ರಹಾಸ ಉಳ್ಳಾಲ್, ಮಂಜುನಾಥ ಭಂಡಾರಿ ಪುತ್ತಿಗೆ ಕಾಸರಗೋಡು, ಹೇರೂರು ದಯಾನಂದ ಶೆಟ್ಟಿ ಬ್ರಹ್ಮಾವರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನೇತ್ರ ತಜ್ಞ ಡಾ.ಕೃಷ್ಣ ಪ್ರಸಾದ್, ರಂಗ ನಿರ್ದೇಶಕ ಸುರೇಶ್ ಆನಗಳ್ಳಿ, ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ಉಪಸ್ಥಿತರಿದ್ದರು. ಉಮೇಶ್ ಎಂ.ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ದರು. ರವಿರಾಜ್ ಎಚ್.ಪಿ. ವಂದಿಸಿದರು. ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News