ಕನ್ನಂಗಾರ್‌ನಲ್ಲಿ ಹುಬ್ಬುರ್ರಸೂಲ್
Update: 2016-01-13 23:49 IST
ಪಡುಬಿದ್ರೆ, ಜ.13: ಪಿಎಫ್‌ಐ ಕನ್ನಂಗಾರ್ ಸಮಿತಿಯ ವತಿಯಿಂದ ಹುಬ್ಬುರ್ರಸೂಲ್ ಕಾರ್ಯಕ್ರಮ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಿದ್ದೀಕ್ ಫೈಝಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಅಂಗರಗುಡ್ಡೆ ಮುದರ್ರಿಸ್ ಅಲ್‌ಹಾದಿ ಇಬ್ರಾಹೀಂ ತಂಙಳ್ ಉದ್ಘಾಟಿಸಿದರು. ಶಾಫಿ ಬೆಳ್ಳಾರೆ ಮತ್ತು ಜಲೀಲ್ ಸಖಾಫಿ ಪ್ರವಾದಿ ಸಂದೇಶ ನೀಡಿದರು. ಹೊಳೆಬದಿ ಮಸೀದಿಯ ಅಧ್ಯಕ್ಷ ಎಂ.ಎಸ್.ಅಬ್ಬಾಸ್ ಹಾಜಿ, ಅಬ್ದುರ್ರಹ್ಮಾನ್ ನಿಟ್ಟೆ, ಪಿಎಫ್‌ಐ ಪಡುಬಿದ್ರೆ ಡಿವಿಝನ್ ಅಧ್ಯಕ್ಷ ಬದ್ರುದ್ದೀನ್ ಕಾಂಜರಕಟ್ಟೆ, ಕನ್ನಂಗಾರ್ ವಲಯಾಧ್ಯಕ್ಷ ಸಿದ್ದೀಕ್, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ಇಮಾಮ್ಸ್ ಕೌನ್ಸಿಲ್‌ನ ಹಾರಿಸ್ ಹನೀಫಿ ಉಪಸ್ಥಿತರಿದ್ದರು.
ಸಿದ್ದೀಕ್ ಹೆಜಮಾಡಿ ವಂದಿಸಿದರು. ಹನೀಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು.