ಕ್ರೀಡಾಕೂಟದಿಂದ ಬಾಂಧವ್ಯ ವೃದ್ಧಿ: ಶಾಸಕ ಪ್ರಮೋದ್
Update: 2016-01-13 23:50 IST
ಉಡುಪಿ, ಜ.13: ಸ್ಥಳೀಯ ನಗರಾಡಳಿತಗಳು ಅತ್ಯಂತ ಹೆಚ್ಚು ಒತ್ತಡದಿಂದ ಕೆಲಸ ಮಾಡುವ ಸಂಸ್ಥೆಗಳಾಗಿವೆ. ರಾಜಕೀಯ ಒಡೆಯುವ ಕೆಲಸ ಮಾಡಿದರೆ ಕ್ರೀಡಾ ಕೂಟವು ಪಕ್ಷಭೇದವಿಲ್ಲದೆ ಎಲ್ಲರಲ್ಲೂ ಬಾಂಧವ್ಯ ಮೂಡಿಸಿ ಒಗ್ಗೂಡಿಸುವ ಕಾರ್ಯ ಮಾಡುತ್ತದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನಗರಸಭೆ ಗಣರಾಜ್ಯೋತ್ಸವ ಕ್ರೀಡಾ ಕೂಟ ಸಮಿತಿಯಿಂದ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳು, ನೌಕರರು ಹಾಗೂ ಕಾರ್ಯನಿರತ ಪತ್ರಕರ್ತರಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿ.ಯುವರಾಜ್, ಅಮೃತಾ ಕೃಷ್ಣಮೂರ್ತಿ, ಪ್ರಶಾಂತ್ ಭಟ್, ಸಾಧು, ಮೆಬಲ್ ಡಿಸೋಜ, ಕುಶಲ್ ಶೆಟ್ಟಿ ಉಪಸ್ಥಿತರಿದ್ದರು.
ಡಿ.ಮಂಜುನಾಥಯ್ಯ ಸ್ವಾಗತಿಸಿದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.