ಪಾರ್ಕಿಂಗ್ ಟೆಂಡರ್ ರದ್ದು
Update: 2016-01-14 00:27 IST
ಉಡುಪಿ, ಜ.13: ನಗರಸಭಾ ವ್ಯಾಪ್ತಿಯ ವಾಹನ ನಿಲುಗಡೆ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು 2015ರ ಜೂ.30ರಿಂದ ಒಂದು ವರ್ಷದ ಅವಗೆ ಸುರೇಂದ್ರ ನಿಟ್ಟೂರು ಇವರಿಗೆ ನೀಡಿದ್ದ ಟೆಂಡರ್‌ನ್ನು ರದ್ದುಪಡಿಸಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಗುತ್ತಿಗೆದಾರರು ಟೆಂಡರ್ ಷರತ್ತಿಗೆ ವ್ಯತಿರಿಕ್ತವಾಗಿ ಶುಲ್ಕ ವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಹಲವು ದೂರುಗಳು ಬಂದಿರುವುದರಿಂದ ಹಾಗೂ ಗುತ್ತಿಗೆದಾರರು ಟೆಂಡರ್ ನಿಯಮಾವಳಿಗಳನ್ನು ಉಲ್ಲಂಸಿರುವುದರಿಂದ ಜ.8ರಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಾಹನ ನಿಲುಗಡೆಯ ಟೆಂಡರ್‌ನ್ನು ರದ್ದುಗೊಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಇದಕ್ಕನುಸಾರವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದ ಆ ಟೆಂಡರ್‌ನ್ನು ಹಿಂಪಡೆಯಲಾಗಿದೆ. ಆದುದರಿಂದ ಸಾರ್ವಜನಿಕರು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸ್ಥಳಗಳಲ್ಲಿ ಯಾವುದೇ ಶುಲ್ಕವನ್ನು ಪಾವತಿಸಬಾರದೆಂದು ನಗರಸಭೆಯ ಪ್ರಕಟನೆ ತಿಳಿಸಿದೆ.