×
Ad

ನಾಳೆ ಸಮಸ್ತ ಸಮ್ಮೇಳನದ ಸಂದೇಶಯಾತ್ರೆ

Update: 2016-01-14 00:31 IST

  ಮಂಗಳೂರು, ಜ.13: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ 90ನೆ ವಾರ್ಷಿಕ ಮಹಾಸಮ್ಮೇಳನದ ಸಂದೇಶ ಯಾತ್ರೆ ಸಲುವಾಗಿ ಮಂಗಳೂರು ಬಂದರ್‌ನ ಕೇಂದ್ರ ಜುಮಾ ಮಸೀದಿಯಲ್ಲಿ ಜ.15 ರಂದು ಸಂಜೆ 4 ಗಂಟೆಗೆ ಸೈಯದ್ ವೌಲ ಜಲಾಲ್ ಮಸ್ತಾನ್ ಮಖಾಂ ಝಿಯಾರತ್‌ನೊಂದಿಗೆ ಸಮಸ್ತ ಸಮ್ಮೇಳನದ ಸಂದೇಶ ಯಾತ್ರೆ ಆರಂಭಗೊಳ್ಳಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಜಿ.ಎಂ.ಶಾಹುಲ್ ಹಮೀದ್ ಮೆಟ್ರೋ ಹೇಳಿದರು.

  ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸಂಜೆ 4ಕ್ಕೆ ಸಾಮೂಹಿಕ ಮಖಾಂ ಝಿಯಾರತ್ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯತ್ತುಲ್ ಉಲಮಾದ ಕೋಶಾಕಾರಿ ಸೈಯದ್ ಜಿಫ್ರಿ ಮುತ್ತುಕೋಯ ತಂಳ್, ಸಮಸ್ತ ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಕೋಟುಮಲೆ ಬಾಪು ಮುಸ್ಲಿಯಾರ್, ಅಲ್ಹಾಜ್ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಹಾಗೂ ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಭಾಗವಹಿಸಲಿರುವರು. ಬಳಿಕ ತೊಕ್ಕೊಟ್ಟು ಉಳ್ಳಾಲ ಮಾರ್ಗವಾಗಿ ತಲಪಾಡಿಗೆ ಕೋಟುಮಲೆ ಬಾಪು ಉಸ್ತಾದ್ ನೇತೃತ್ವದಲ್ಲಿ ಸಂದೇಶ ಯಾತ್ರೆ ಜರಗಲಿದೆ ಎಂದು ಹೇಳಿದರು.

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ 90ನೆ ವಾರ್ಷಿಕ ಮಹಾಸಮ್ಮೇಳನವು ‘ಆದರ್ಶ ಪರಿಶುದ್ಧತೆಯ 90ನೆ ವರ್ಷ’ ಎಂಬ ಘೋಷಣೆಯೊಂದಿಗೆ ಕೇರಳದ ಆಲುಝ ವರಕ್ಕಲ್ ಮುಲ್ಲಕೋಯ ತಂಳ್ ನಗರದಲ್ಲಿ ೆ.11ರಿಂದ 14ರವರೆಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಐವತ್ತು ಸಾವಿರಕ್ಕೂ ಅಕ ಮಂದಿ ಜಿಲ್ಲೆಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಐ. ಮೊಯ್ದಿನಬ್ಬ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋಡಿ, ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಹಾಜಿ ಅಬ್ದುಲ್ಲತ್ೀ, ಮದರ್ ಇಂಡಿಯಾ ತೋಡಾರು, ಹಾಜಿ ರಫೀಕ್ ಕೋಡಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News