×
Ad

ಕದ್ರಿ ಉದ್ಯಾನವನದಲ್ಲಿ ಜೂನ್‌ನೊಳಗೆ ಸಂಗೀತ ಕಾರಂಜಿ

Update: 2016-01-14 09:51 IST
Editor : Vartha bharati

ಮಂಗಳೂರು: ನಗರದ ಕದ್ರಿ ಉದ್ಯಾನವನ ಪಕ್ಕದ ಜಿಂಕೆ ಪಾರ್ಕ್‌ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ಜೂನ್‌ನೊಳಗೆ ನಿರ್ಮಾಣಗೊಂಡು ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ.

ಕದ್ರಿ ಉದ್ಯಾನವನದ ಎದುರಿನ ಜಿಂಕೆ ಪಾರ್ಕ್‌ನಲ್ಲಿ ಸಂಗೀತ ಕಾರಂಜಿಯ ಕಾಮಗಾರಿಗೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಇರುವ ಶೇ. 90ರಷ್ಟು ಮರಗಳನ್ನು ಉಳಿಸಿಕೊಂಡು ಈ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ವೆಂಕಟೇಶ್ ಪೈ ಸಂಗೀತ ಕಾರಂಜಿಯ ವಿನ್ಯಾಸಗಾರರಾಗಿದ್ದು, ಲ್ಯಾಂಡ್ ಸ್ಕೇಪ್, ಬಯಲು ರಂಗಮಂದಿರ, ಲೇಸರ್, ಶಾಪಿಂಗ್ ಕಿಯಾಸ್ಕ್‌ನೊಂದಿಗೆ ಈ ಸಂಗೀತ ಕಾರಂಜಿ ನಿರ್ಮಾಣವಾಗಲಿದ್ದು, ಜತೆಗೆ ಪಾರ್ಕ್‌ನಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳೂ ನಡೆಯಲಿವೆ ಎಂದು ಅವರು ಹೇಳಿದರು. ಈ ಸಂದರ್ಭ ಮೂಡಾ ಆಯುಕ್ತ ಮುಹಮ್ಮದ್ ನಝೀರ್, ಕಾಂಗ್ರೆಸ್ ನಾಯಕ ಟಿ.ಕೆ. ಸುಧೀರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. 

Writer - Vartha bharati

contributor

Editor - Vartha bharati

contributor

Similar News