×
Ad

ಕಾಸರಗೋಡು: ಜ.20ರಂದು ವಿಮೋಚನಾ ಯಾತ್ರೆ

Update: 2016-01-14 10:46 IST

ಕಾಸರಗೋಡು: ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್  ನೇತ್ರತ್ವದ  ವಿಮೋಚನಾ ಯಾತ್ರೆ  ಜನವರಿ 20 ರಂದು ಉಪ್ಪಳ ದಿಂದ  ಹೊರಡಲಿದೆ.  

ಅಂದು ಬೆಳಿಗ್ಗೆ 10.30 ಕ್ಕೆ ಉಪ್ಪಳ ದಲ್ಲಿ  ನಡೆಯುವ  ಸಮಾರಂಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು  ಯಾತ್ರೆಗೆ  ಚಾಲನೆ ನೀಡುವರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ  ಎಚ್ . ರಾಜಾ, ಚಿತ್ರ ನಟ ಸುರೇಶ್ ಗೋಪಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು .  

ರಾಜ್ಯದ 140 ವಿಧಾನಸಭಾ ಕ್ಷೇತ್ರದ ಮೂಲಕ ಹಾಡು ಹೋಗುವ ಯಾತ್ರೆ  ಫೆಬ್ರವರಿ 10 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದ್ದು , ಕೇಂದ್ರ  ಗ್ರಹ  ಸಚಿವ ರಾಜ್ ನಾಥ್ ಸಿಂಗ್   ಉದ್ಘಾಟಿಸುವರು .
ಎಲ್ಲರಿಗ್ಗೂ ಅನ್ನ, ನೀರು , ಉದ್ಯೋಗ , ಮಣ್ಣು ಎಂಬ ಘೋಷಣೆ ಯೊಂದಿಗೆ ಈ ಯಾತ್ರೆ ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಕಟಣೆ ಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News