ನೆಲ್ಲಿಕಟ್ಟೆ: ಸಮಸ್ತ ವಾರ್ಷಿಕೋತ್ಸವದ ಪ್ರಚರಣಾ ಸಮ್ಮೇಳನ
Update: 2016-01-14 15:47 IST
ಕಾಸರಗೋಡು: ನೆಲ್ಲಿಕಟ್ಟೆ ಸಮಸ್ತ 90ನೇ ವಾರ್ಷಿಕೋತ್ಸವದ ಪ್ರಚರಣಾ ಸಮ್ಮೇಳನ ಹಾಗೂ ಮಜ್ಲಿಸ್‌ಗೆ ಗುರುವಾರದಂದು ಚಾಲನೆಯಾಯಿತು.
ಸ್ವಾಗತ ಸಮಿತಿ ಕೋಶಾಧಿಕಾರಿ ಹಮೀದ್ ಹಾಜಿ ಚೆರ್ಳಡ್ಕ ಧ್ವಜಾರೋಹಣಗೈದರು. ಪಿ. ಎ. ಝುಬೈರ್ ದಾರಿಮಿ ಪೈಕ ಪ್ರಾರ್ಥನೆ ನಡೆಸಿದರು. ಅಶ್ರಫ್ ಮಿಸ್ಬಾಹಿ, ಬಿ. ಕೆ. ಬಶೀರ್ ಪೈಕ, ಶೆರೀಫ್ ಹನೀಫಿ, ಅಶ್ರಫ್ ವೌಲವಿ, ಹನೀಫ್ ಕರಿಂಙಪಳ್ಳ, ರಝಾಕ್ ಪೈಕ, ಖಾದರ್ ನೆಲ್ಲಿಕಟ್ಟೆ, ಸಿ. ಪಿ. ವೌಲವಿ ಕೆ. ಕೆ., ಅಶ್ರಫ್ ಫೈಝಿ, ಅಬ್ದುಲ್ ಹಮೀದ್ ಫೈಝಿ ಆದೂರು ಉಪಸ್ಥಿತರಿದ್ದರು.