ಲಯನ್ಸ್ ಸೇವಾರಥಕ್ಕೆ ಸುಳ್ಯದಲ್ಲಿ ಚಾಲನೆ
ಸುಳ್ಯ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಸಂಭ್ರಮದ ಅಂಗವಾಗಿ ಲಯನ್ಸ್ ಜಿಲ್ಲೆ 317 ಡಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಲಯನ್ಸ್ ಸೇವಾರಥ ಸುಳ್ಯ ಪ್ರವೇಶಿಸಿದಾಗ ಸ್ವಾಗತ ಕಾರ್ಯಕ್ರಮ ನಡೆಯಿತು.
ಜ್ಯೋತಿ ಸರ್ಕಲ್ ಬಳಿ ರಥಕ್ಕೆ ಚಾಲನೆ ನೀಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ಮಾತನಾಡಿ, ಆರೋಗ್ಯ, ಸೇವೆ ಹಾಗೂ ಸಮಾಜ ಕಾರ್ಯದ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಲಯನ್ಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು. ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವರು, ಲಯನ್ಸ್‌ಗೆ ಸೇವೆಯೇ ಆಧಾರಸ್ತಂಭ. ನಮ್ಮ ಚಿಹ್ನೆಯ ಸಂಕೇತದಂತೆ ನಮ್ಮದು ರಾಜಗಾಂಭೀರ್ಯದ ಸೇವೆ. ಕಣ್ಣಿಲ್ಲದವರಿಗೆ ಬಾಳ್ವೆ ನೀಡುವ ಮೂಲಕ ಲಯನ್ಸ್ ಮಹತ್ವದ ಕ್ರಾಂತಿ ಮಾಡಿದೆ ಎಂದರು.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ ಹರಪ್ರಸಾದ್ ತುದಿಯಡ್ಕ, ಅನ್ಸಾರಿಯಾ ಯಂತೀಂಖಾನದ ಹಾಜಿ ಅಬ್ಬಾಸ್ ಕಟ್ಟೆಕ್ಕಾರ್ ಶುಭಾಂಸನೆಗೈದರು. ತಾ.ಪಂ. ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ರೋಟರಿ ಕ್ಲಬ್ ಅಧ್ಯಕ್ಷ ಬೆಳಿಯಪ್ಪ ಗೌಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವೆಂಕಟ್ರಮಣ ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಳಿನ್‌ಕುಮಾರ್ ಕೋಡ್ತುಗುಳಿ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಗಿರೀಶ್ ಅಡ್ಪಂಗಾಯ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ನ.ಪಂ. ಸದಸ್ಯ ಕೆ.ಎಂ.ಮುಸ್ತಫ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಭಾಗವಹಿಸಿದ್ದರು.
ಲಯನ್ಸ್ ವಲಯಾಧ್ಯಕ್ಷ ಜಾಕೆ ಮಾಧವ ಗೌಡ, ರಥ ಯಾತ್ರೆಯ ಸಂಚಾಲಕ ಕೆ.ಸಿ.ಪ್ರಭು, ಸಂಯೋಜಕ ಪ್ರಶಾಂತ್ ಪೈ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ ಪ್ರಕಾಶ್ ಡಿ’ಸೋಜಾ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಯೊಬ್ಬನ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು