ತೆಕ್ಕಿಲ್ ಶಾಲೆಗೆ ಯೆನೆಪೊಯ ಎಕ್ಸೆಲೆನ್ಸ್ ಅವಾರ್ಡ್
Update: 2016-01-14 18:01 IST
ಸುಳ್ಯ: ತೆಕ್ಕಿಲ್ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ವತಿಯಿಂದ ಗೂನಡ್ಕದಲ್ಲಿ ನಡೆಸುತ್ತಿರುವ ತೆಕ್ಕಿಲ್ ಆಂಗ್ಲಮಾದ್ಯಮ ಹೈಸ್ಕೂಲ್‌ಗೆ ಯೆನೆಪೊಯ ಎಕ್ಸೆಲೆನ್ಸ್ ಅವಾರ್ಡ್ ಮತ್ತು ನಗದು ಬಹುಮಾನವನ್ನು ಮಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಯೆನೆಪೊಯ ವಿಶ್ವವಿದ್ಯಾಲಯದ ಪ್ರೊಫೆಸರ್ ಪಿ.ಸಿ.ಎಂ. ಕುಂಞಿಯವರು ಶಾಲಾ ಮುಖ್ಯೋಪಾದ್ಯಾಯಿನಿ ಹರಿಣಾಕ್ಷಿಯವರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಹೀದ್, ಡಾ. ಸಿತ್ತಾರ ತೆಕ್ಕಿಲ್, ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿಗಳಾದ ವೈ. ಅಬ್ದುಲ್ಲ ಕುಂಞಿ, ಮೂಡ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಚಾಲ್, ಶಾಸಕ ಜೆ.ಆರ್ ಲೋಬೊ, ಯೆನೆಪೊಯ ಫೌಂಡೇಶನ್ ಚಯರ್ ಮ್ಯಾನ್ ಯೆನೆಪೊಯ ಮುಹಮ್ಮದ್ ಕುಂಞಿ, ಮೊದಲಾದವರು ಉಪಸ್ಥಿತರಿದ್ದರು.