×
Ad

ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ನಾಲ್ಕು ರ್ಯಾಂಕ್

Update: 2016-01-14 18:23 IST

ಸುಳ್ಯ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆಸಿದ 2015ರ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸುಳ್ಯದ ಕೆವಿಜಿ ಮೆಡಿಕ್ ಕಾಲೇಜಿಗೆ ನಾಲ್ಕು ರ್ಯಾಂಕ್ ಲಭಿಸಿದೆ.

  ಅರವಳಿಕೆ ಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಆಯೇಷಾ ಗೋಯಲ್ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆಯಲು ಅರ್ಹರಾಗಿರುತ್ತಾರೆ. ಕಿವಿ, ಮೂಗು, ಗಂಟಲು ಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೆರ್ರಿ ಜೋಸೆಫ್ ರವರು ಐದನೇ ರ್ಯಾಂಕ್ ಪಡೆದಿದ್ದಾರೆ.

ಚರ್ಮ ಲೈಂಗಿಕ ಮತ್ತು ಕುಷ್ಠ ರೋಗ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೆರಿನ್ ಮೇರಿ ಜೋನ್ ಎಂಟನೇ ರ್ಯಾಂಕ್ ಪಡೆದಿದ್ದಾರೆ. ರೇಡಿಯೋ ಡಯಾಗ್ನಾಸಿಸ್ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೃಂಗ ತೇಜಸ್ವಿ ಒಂಬತ್ತನೇ ರ್ಯಾಂಕ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News