×
Ad

ಮೂಡುಬಿದಿರೆ: ಮಹಿಳೆ ಕಾಣೆಯಾಗಿದ್ದಾರೆ

Update: 2016-01-14 18:54 IST

ಮೂಡುಬಿದಿರೆ: ನಿಡ್ಡೋಡಿ ಯಮಲ ಮನೆಯ ರೇವತಿ (46 ವ.) ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ತಿಮ್ಮಪ್ಪ ಮಡಿವಾಳ ಮೂಡುಬಿದಿರೆ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ನಿಡ್ಡೋಡಿಗೆ ಹೋಗಿ ಬರುವುದಾಗಿ ಅತ್ತೆಯಲ್ಲಿ ತಿಳಿಸಿ, ಮಂಗಳವಾರ ಸಂಜೆ 4 ಗಂಟೆಗೆ ಮನೆಯಿಂದ ತೆರಳಿದ ರೇವತಿ ಮನೆಗೆ ಮರಳಿ ಬಾರದ ಬಗ್ಗೆ ರೇವತಿಯ ತಮ್ಮನಿಗೆ ಆಕೆಯ ಅತ್ತೆ ಸಂಜೆ 6 ಗಂಟೆಗೆ ಕರೆ ಮಾಡಿ ತಿಳಿಸಿದ್ದರು.
ಪತಿ 4 ವರ್ಷದ ಹಿಂದೆ ಹೆಚ್.ಐ.ವಿ.ಯಿಂದ ಮೃತಪಟ್ಟಿದ್ದು;ಆಕೆಯೂ ಹೆಚ್.ಐ.ವಿ. ಪೀಡಿತಳಾಗಿದ್ದು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಓರ್ವ ಪುತ್ರನಿದ್ದು ಆತ ಸೋದರಮಾವನೊಂದಿಗೆ ವಾಸವಾಗಿದ್ದು; ರೇವತಿ ತನ್ನ ಅತ್ತೆಯೊಂದಿಗೆ ಪತಿ ಮನೆಯಲ್ಲಿಯೇ ವಾಸವಾಗಿದ್ದರು.
ಚಹರೆ ಇಂತಿವೆ: ಎತ್ತರ 5 ಅಡಿ, ತಿಳಿಗೋಧಿ ಮೈ ಬಣ್ಣ, ಕೋಲು ಮುಖ, ಗುಂಗುರು ಕೂದಲು, ನೀಲಿ ಬಿಳಿ ಕೆಂಪು ಬಣ್ಣದ ನೈಟಿ ಧರಿಸಿದ್ದು: ಕನ್ನಡ, ತುಳು ಭಾಷೆ ಮಾತನಾಡುತ್ತರೆ.
 ಈಕೆ ಪತ್ತೆಯಾದಲ್ಲಿ ಪೊಲೀಸು ಆಯುಕ್ತರು, ಮಂಗಳೂರು ನಗರ, ಮಂಗಳೂರು ಅಥವಾ ಮೂಡುಬಿದರೆ ಠಾಣೆ ಅಥವಾ ಪಿ.ಐ., ಪಿ.ಎಸ್.ಐ. ಮೂಡುಬಿದರೆ ಅವರಿಗೆ ತಿಳಿಸುವಂತೆ ಕೋರಲಾಗಿದೆ.
ಸಂಪಕಿಸಬೇಕಾದ ದೂರವಾಣಿ ಸಂಖ್ಯೆಗಳು:  ರವೀಂದ್ರನಾಥ ರೈ- 9448214819. ಪೊಲೀಸು ಆಯುಕ್ತರು:0824-2220801, 2220800 ಅಥವಾ ಮೂಡುಬಿದಿರೆ ಪೊಲೀಸು ಠಾಣೆ: 08258-236333.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News