×
Ad

ನೆಲ್ಲಿಕಾರಿನಲ್ಲಿ ಅಕ್ರಮ ಮರ ಸಾಗಾಟ : ಅರಣ್ಯಾಧಿಕಾರಿಗಳ ವಶಕ್ಕೆ

Update: 2016-01-14 21:14 IST

ಮೂಡುಬಿದಿರೆ : 50 ಸಾವಿರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಸಹಿತ ಲಾರಿಯನ್ನು ಮೂಡುಬಿದಿರೆ ಅರಣ್ಯಾಧಿಕಾರಿಗಳು ನೆಲ್ಲಿಕಾರು ಗ್ರಾ.ಪಂನ ನೇರಳ್‌ಕಟ್ಟೆ ಎಂಬಲ್ಲಿ ಬುಧವಾರ ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದಾರೆ.  ಚಾಲಕ ವಾಲ್ಪಾಡಿಯ ಅಬ್ದುಲ್ ರಝಾಕ್ ಎಂಬವರು ಕೆ.ಎ.05 ಬಿ-1064 ಲಾರಿಯಲ್ಲಿ ಬೋಗಿ ಮತ್ತು ಕಾಟು ಮರಗಳ ತುಂಡುಗಳನ್ನು ಮುಂಜಾನೆ ವೇಳೆ ಸಾಗಿಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ವಲಯ ಅರಣಾಧಿಕಾರಿ ಜಿ.ಡಿ ದಿನೇಶ್ ನೇತೃತ್ವದಲ್ಲಿ ಶಿರ್ತಾಡಿ ಉಪವಲಯಾರಣ್ಯಾಧಿಕಾರಿ ಬಂದ್ರಕಾಂತ್ ಮತ್ತು ಸಿಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಅಬ್ದುಲ್ ರಝಾಕ್ ಅವರಿಗೆ ಜಾಮೀನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News