×
Ad

ಮಂಗಳೂರು: 81.67 ಲಕ್ಷ ರೂ. ವೌಲ್ಯದ ವಿದೇಶಿ ಕರೆನ್ಸಿ ಸಹಿತ ಆರೋಪಿ ಸೆರೆ

Update: 2016-01-14 22:12 IST

ಮಂಗಳೂರು, . 14: ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಂದಾಯ ಇಲಾಖಾ ನಿರ್ದೇಶನಾಲಯ ಇಲಾಖಾಕಾರಿಗಳು ಕಾರ್ಯಾಚರಣೆ ನಡೆಸಿ ಲಕ್ಷಾಂತರ ವೌಲ್ಯದ ವಿದೇಶಿ ಕರೆನ್ಸಿಗಳ ಸಹಿತ ವ್ಯಕ್ತಿಯೋರ್ವನನ್ನು ಬಂಸಿದ್ದಾರೆ.

 ಬಂಧಿತ ವ್ಯಕ್ತಿಯನ್ನು ಮೂಲತಃ ಭಟ್ಕಳ ನಿವಾಸಿ ಮುಹಮ್ಮದ್ ಅಯೂಬ್(28) ಎಂದು ಗುರುತಿಸಲಾಗಿದೆ. ಈತನಿಂದ ಭಾರತೀಯ ವೌಲ್ಯದ ರೂ. 81, 67,110 ಗಳ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.

  ಡಿ.14ರಂದು ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈತನನ್ನು ಅಕಾರಿಗಳು ತಪಾಸಣೆ ನಡೆಸಿದಾಗ ವಿವಿಧ ದೇಶಗಳ ಕರೆನ್ಸಿಗಳು ಪತ್ತೆಯಾಗಿದ್ದು, ಕರೆನ್ಸಿ ಸಮೇತ ವಶಕ್ಕೆ ಪಡೆಯಲಾಗಿದೆ.

 ಬ್ರಿಟಿಷ್ ಪೌಂಡ್ಸ್, ಯು.ಎಸ್.ಡಾಲರ್ಸ್‌, ಈರೋಸ್, ಆಸ್ಟ್ರೇಲಿಯನ್ ಡಾಲರ್ಸ್‌, ಸೌದಿ ರಿಯಾಲ್ಸ್, ಯುಎಇ ದಿರ್ಹಂ, ಕತಾರ್ ರಿಯಾಲ್, ಓಮನ್ ರಿಯಾಲ್ ಮತ್ತು ಕುವೈಟ್ ದಿನಾರ್‌ಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News