ಉದ್ಯಾವರ: ಪ್ರವಾದಿ ಸಂದೇಶ ಕಾರ್ಯಕ್ರಮ
Update: 2016-01-14 23:26 IST
ಉಡುಪಿ, ಜ.14: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಉಡುಪಿ ತಾಲೂಕು ಘಟಕದ ವತಿಯಿಂದ ಹುಬ್ಬುನ್ನಬಿ(ಸಅ) ಅಭಿಯಾನದ ಪ್ರಯುಕ್ತ ಪ್ರವಾದಿ ಸಂದೇಶ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಯಾವರ ಸಿದ್ದೀಕ್ ಅಕ್ಬರ್ ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಕೌನ್ಸಿಲ್‌ನ ಜಿಲ್ಲಾ ಉಪಾಧ್ಯಕ್ಷ ವೌಲಾನಾ ಜಾವೇದ್ ಖಾಸ್ಮಿ ವಹಿಸಿದ್ದರು. ಮಸೀದಿ ಖತೀಬ್ ವೌಲಾನ ಅಬ್ದುರ್ರಶೀದ್ ಕಿರಾಅತ್ ಪಠಿಸಿದರು. ಮುಖ್ಯ ಅತಿಥಿಗಳಾಗಿ ವೌಲಾನಾ ಅಬ್ದುಸ್ಸುಬಾನ್ ನದವಿ ಮದನಿ, ಶಾಫಿ ಬೆಳ್ಳಾರೆ ಉಪಸ್ಥಿತರಿದ್ದರು.
ವೌಲಾನ ಅಸ್ಗರ್ ಅಲಿ ಖಾಸ್ಮಿ ಸ್ವಾಗತಿಸಿದರು. ವೌಲಾನ ತೌಕೀರ್ ಅಹ್ಮದ್ ಖಾಸ್ಮಿ ಕಾರ್ಯಕ್ರಮ ನಿರೂಪಿಸಿದರು.