ಸುರತ್ಕಲ್: ರಸ್ತೆ ಸುರಕ್ಷತಾ ಜಾಥಾ
ಸುರತ್ಕಲ್, ಜ.14: ಮಂಗಳೂರು ನಗರ ಪೊಲೀಸ್, ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರ ವತಿಯಿಂದ ವಿದ್ಯಾದಾಯಿನಿ, ಗೋವಿಂದದಾಸ ಕಾಲೇಜು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ 27ನೆ ರಸ್ತೆ ಸುರಕ್ಷತಾ ಸಪ್ತಾಹ 2016ದ ಪ್ರಯುಕ್ತ ಸುರತ್ಕಲ್ ಪರಿಸರದಲ್ಲಿ ಜಾಥಾ ನಡೆಯಿತು.
ಈ ಸಂದರ್ಭ ಮಾತನಾಡಿದ ಮಂಗಳೂರು ಉತ್ತರ ವಲಯ ಸಂಚಾರಿ ಠಾಣೆಯ ನಿರೀಕ್ಷಕ ಮಂಜುನಾಥ್, ಸಂಚಾರಿ ವೃತ್ತ ವ್ಯಾಪ್ತಿಯಲ್ಲಿ ಎ.ಜೆ. ಆಸ್ಪತ್ರೆ ತನಕ ಸಪ್ತಾಹದ ಪ್ರಯುಕ್ತ ಎಲ್ಲ ಚಾಲಕ-ನಿರ್ವಾಹಕರಿಗೆ, ಸಾರ್ವಜನಿಕರಿಗೆ, ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.
ಸುರತ್ಕಲ್ ರೋಟರಿಯ ಅಧ್ಯಕ್ಷ ರಾಜ್‌ಮೋಹನ್ ರಾವ್, ಇನ್ನರ್ ಅಧ್ಯಕ್ಷೆ ವಿದ್ಯಾ ಅರವಿಂದ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಮುರಳೀಧ ರ ರಾವ್, ಉಪ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ದಯಾನಂದ ಶೆಟ್ಟಿ ಕಡಂಬೋಡಿ, ಉಮೇಶ್ ದೇವಾಡಿಗ ಉಪಸ್ಥಿತರಿದ್ದರು.