×
Ad

ಉಡುಪಿಯ ಹಾರಾಡಿ ಭೂಮಿಕಾ ತಂಡ ತೃತೀಯ

Update: 2016-01-14 23:32 IST


 ಮುಂಬೈ, ಜ.14: ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಆಯೋಜಿಸಿದ್ದ 20ನೆ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯಲ್ಲಿ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕ ಪ್ರದರ್ಶಿಸಿದ ದೃಶ್ಯ ಕಾವ್ಯ ತಂಡ ಬೆಂಗಳೂರು ಪ್ರಥಮ‘ಪದ್ಮಪಾಣಿ’ ನಾಟಕ ಪ್ರದರ್ಶಿಸಿದ ಬಾಷ್ ಲಲಿತಾಕಲಾ ಸಂಘ ಬೆಂಗಳೂರು (ಸಮನ್ವಯ) ತಂಡ ದ್ವಿತೀಯ ಮತ್ತು ‘ಅರಗಿನ ಬೆಟ್ಟ’ ನಾಟಕ ಪ್ರದರ್ಶಿಸಿದ ಭೂಮಿಕಾ ಹಾರಾಡಿ (ಉಡುಪಿ) ತಂಡವು ತೃತೀಯ ಬಹುಮಾನ ಪಡೆ ಯಿತ
ಮಾಟುಂಗ ಪಶ್ಚಿಮದಲ್ಲಿರುವ ಸಂಘದ ಡಾ.ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕವಿ ಸುಬ್ಬು ಹೊಲೆಯಾರ್ ಅಧ್ಯಕ್ಷತೆಯಲ್ಲಿ ನಾಟಕೋತ್ಸವ ಸ್ಪರ್ಧಾ ಸಮಾರೋಪ ನಡೆಯಿತು. ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ವಸಂತ ಬನ್ನಾಡಿ ಮತ್ತು ಸಂಘದ ಗೌರವ ಕೋಶಾಧಿಕಾರಿ ಬಿ.ಜಿ ನಾಯಕ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಡಾ.ಸಾಸ್ವೇಹಳ್ಳಿ ಸತೀಶ್, ಧನಂಜಯ ಕುಲಕರ್ಣಿ, ಅರುಣ ಮೂರ್ತಿ ಸಹಕರಿಸಿದರು. ಸುಂದರ ಕೋಟ್ಯಾನ್, ಅವಿನಾಶ್ ಕಾಮತ್, ಸುರೇಂದ್ರ ಮಾರ್ನಾಡ್, ಹರೀಶ್ ಹೆಬ್ಬಾರ್, ಕೆ.ವಿ.ಆರ್ ಐತಾಳ್, ಕವಿತಾ ಸಾಸ್ವೇಹಳ್ಳಿ, ಸುಪ್ರೀಯಾ ಹಡಪದ ಅವರನ್ನು ಗೌರವಿಸಲಾಯಿತು. ಸುರೇಂದ್ರ ಮಾರ್ನಾಡ್ ಹಾಗೂ ಕೆ.ವಿ. ಆರ್. ಐತಾಳ್, ಅನಿತಾ ಪೂಜಾರಿ ತಾಕೋಡೆ ಗಣ್ಯರನ್ನು ಪರಿಚಯಿಸಿದರು. ರಂಗತಜ್ಞ ಡಾ. ಭರತ್‌ಕುಮಾರ್ ಪೊಲಿಪು ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಎಂ.ಡಿ. ರಾವ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News