×
Ad

ಆದರ್ಶ ಜೀವನದ ಗುರಿ ಮುಟ್ಟಲು ಪುಸ್ತಕದ ಓದು ಅಗತ್ಯ: ಪೂಂಜ

Update: 2016-01-14 23:33 IST


ಉಡುಪಿ, ಜ.14: ಆದರ್ಶ ಜೀವನದ ಗುರಿ ಮುಟ್ಟಲು ಪುಸ್ತಕದ ಓದು ಅಗತ್ಯ. ಸ್ವಾಮಿ ವಿವೇಕಾನಂದರ ಸ್ಫೂರ್ತಿ, ಆದರ್ಶಗಳನ್ನು ನಾವು ಅನುಸರಿಸಿದಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಅದಕ್ಕೆ ಪೂರಕವಾಗಿ ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಜ್ಞಾನನಿಧಿಯಷ್ಟು ಒಳ್ಳೆಯ ನಿಧಿ ಬೇರೆ ಇಲ್ಲ ಎಂದು ಉಡುಪಿ ಲಯನ್ಸ್ ಅಧ್ಯಕ್ಷ ದಿನಕರ ಶೆಟ್ಟಿ ಪೂಂಜ ಹೇಳಿದ್ದಾರೆ.
 ಉಡುಪಿ ವಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾ ನಂದರ 153ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
 ‘ಪುಸ್ತಕ ಓದಿ ಬಹುಮಾನ ಗೆಲ್ಲಿ’ ಶಾಲಾ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಬಂಧ ಬರೆದು ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಹಾಗೂ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ದಾನಿ ಗಳ ನೆರವಿನಿಂದ ನವೀಕೃತಗೊಂಡ ಶಾಲಾ ಸಭಾ ವೇದಿಕೆಯನ್ನು ಅನಾವರಣಗೊಳಿಸ ಲಾಯಿತು. ‘ಸಾಧನೆಯ ಹಾದಿ’ ಪುಸ್ತಕ ಗಳನ್ನು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
 ಅಧ್ಯಕ್ಷತೆಯನ್ನು ನಗರಸಭಾ ಸದಸ್ಯೆ ಗೀತಾ ರವಿಶೇಟ್ ವಹಿಸಿದ್ದರು. ಉಡುಪಿ ಲಯನ್ಸ್‌ನ ರಮಾನಂದ, ಮಮತಾ ಶೆಟ್ಟಿ, ತೋನ್ಸೆ ಲಕ್ಷ್ಮೀದೇವಿ ನಿರುಪಮಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ರಾಧಿಕಾ ಶೆಟ್ಟಿ, ವಾಸುದೇವ ಚಿಟ್ಪಾಡಿ, ರಮ್ಯ ರವಿರಾಜನ್, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದು ರಮಾನಂದ ಭಟ್, ಸದಸ್ಯರಾದ ಸದಾಶಿವ ರಾವ್, ಅನ್ನಪೂರ್ಣ ಐತಾಳ್, ರವಿರಾಜ್ ನಾಯಕ್, ಉಮೇಶ್ ನಾಯಕ್, ದೇವರಾಜ್ ನಾಯಕ್, ನಾಗಭೂಷಣ ಶೇಟ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ. ಸ್ವಾಗತಿಸಿದರು. ಶಿಕ್ಷಕ ವೆಂಕಟ ರಮಣ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಶ್ರೇಯಾ, ಶೈನಿ, ಶಿಕ್ಷಕಿ ಬಾಬಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News