×
Ad

ಆರ್‌ಬಿಐ ಕೆಲಸದ ಸಂಸ್ಕೃತಿ ಬದಲಾವಣೆಗೆ ಗವರ್ನರ್ ರಘುರಾಮ ರಾಜನ್ ಕರೆ

Update: 2016-01-14 23:47 IST

ಮುಂಬೈ, ಜ.14: ಕಡಿಮೆ ಅಧಿಕಾರಶಾಹಿ, ಹೊರಗಿನ ಯೋಚನೆಗಳೊಂದಿಗೆ ಹೆಚ್ಚು ಸಂವಹನ ಹಾಗೂ ಮುಕ್ತತೆ ಮತ್ತು ವಿಧೇಯತೆಯ ಸುಧಾರಣೆಯೊಂದಿಗೆ 81 ವರ್ಷ ಹಳೆಯ ಕೇಂದ್ರೀಯ ಬ್ಯಾಂಕ್‌ನ ಕೆಲಸದ ಸಂಸ್ಕೃತಿಯನ್ನು ಸುಧಾರಿಸುವಂತೆ ಆರ್‌ಬಿಐ ಗವರ್ನರ್ ರಘುರಾಮರಾಜನ್ ಸಿಬ್ಬಂದಿಗೆ ಸವಾಲು ಹಾಕಿದ್ದಾರೆ.
‘‘ಟೀಕಾಕಾರರ ಮನಸ್ಸಿನಲ್ಲಿ ಮೂಡುವ ಚಿತ್ರ ಪಾರಂಪರಿಕ ಅನೂಹಾತ್ಮಕ ಸಂಘಟನೆಯೇ ಹೊರತು ಬಲಿಷ್ಠ ಹಾಗೂ ಬುದ್ಧಿವಂತ ಸಂಘಟನೆಯಲ್ಲ. ನಮ್ಮ ನಿಬಂಧನೆಗಳೂ ಯಾವಾಗಲೂ ಅತ್ಯಂತ ಸ್ಟಷ್ಟವಾಗಿರುವುದಿಲ್ಲ. ನಮ್ಮ ಸಿಬ್ಬಂದಿ ಕೆಲವೊಮ್ಮೆ ನಮ್ಮದೇ ನಿಬಂಧನೆಗಳ ಬಗ್ಗೆ ತಿಳಿದಿರುವುದಿಲ್ಲ ಹಾಗೂ ಗ್ರಾಹಕರಿಗೆ ಸಹಾಯ ಮಾಡಲು ಬಯಸುವುದಿಲ್ಲ. ನಮ್ಮ ಪ್ರತಿಕ್ರಿಯೆಗಳು ಕೆಲವೊಮ್ಮೆ ಅತಿಯಾಗಿ ನಿಧಾನ ಹಾಗೂ ಆಡಳಿತಶಾಹಿಯಾಗಿರುತ್ತವೆ’’. ಎಂದು ಆರ್‌ಬಿಐಯ 17 ಸಾವಿರ ಸಿಬ್ಬಂದಿಗೆ ರಾಜನ್ ಮೆಮೊ ಒಂದನ್ನು ಬರೆದಿದ್ದಾರೆ.
ಭಾರತದಲ್ಲಿ ನಾವು, ಆತ ಸಣ್ಣವ ಹಾಗೂ ದುರ್ಬಲನಾಗಿರುವವನಿಗೆ ಹೊರತು ತಪ್ಪುಗಾರರಿಗೆ ಶಿಕ್ಷೆ ವಿಧಿಸುವುದಿಲ್ಲ ಎನ್ನುವ ಮೂಲಕ ಅವರು ಆರ್‌ಬಿಐಯಲ್ಲಿ ವಿಧೇಯತೆಯ ಅನುಷ್ಠಾನ ಕಾಣಿಸುವುದಿಲ್ಲವೆಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತಮ ಸಾಧಕರಿಗೆ ಉತ್ತಮ ಬಹುಮಾನದ ಪರಿಶೀಲನಾ ವುವಸ್ಥೆಯ ಮೂಲಕ ಸಾಧನೆಯ ಮಟ್ಟವನ್ನು ಸುಧಾರಿಸುವಂತೆ ಸಿಬ್ಬಂದಿಗೆ ಸವಾಲು ಹಾಕಿರುವ ರಾಜನ್, ಉದ್ಯೋಗಿಗಳ ನಡುವೆ ಸಂಪರ್ಕವನ್ನು ಸುಧಾರಿಸುವಂತೆ ಒತ್ತಿ ಹೇಳಿದ್ದಾರೆ.
ಆರ್‌ಬಿಐಯ ಹೊರಗಿನ ವಲಯಗಳ ಬಗ್ಗೆ ಕೆಲವು ಸಿಬ್ಬಂದಿ ಸಾಕಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮಾಜಿ ಮುಖ್ಯ ಆರ್ಥಿಕಜ್ಞ , ಹೊರಗಿನ ಮೂಲಗಳನ್ನು ಓದಿ, ‘ವಿಶಾಲ ವಿಶ್ವದ’ ಕುರಿತು ಕಲಿಯುವಂತೆ ಉದ್ಯೋಗಿಗಳನ್ನು ಆಗ್ರಹಿಸಿದ್ದಾರೆ.
ಸಂಘಟನೆಯು ಅದ್ಭುತವಾಗಿ ಉಳಿಯ ಬೇಕಾದರೆ ಇದು ಬದಲಾಗಬೇಕು. ಸಾರ್ವಜನಿಕ ಹಾಗೂ ಆತ್ಮತೃಪ್ತಿಯಲ್ಲಿ ಮಧ್ಯಮ ದರ್ಜೆಗೆ ನಿಧಾನ ಪತನವು ಅಡಗಿದೆಯೆಂದು ರಾಜನ್ ಬರೆದಿದ್ದಾರೆ.
ಸೇವಾ ಹಿರಿತನವೇ ಭಡ್ತಿಗೆ ನಿರ್ಧಾರಕವೆಂಬ ಪರಂಪರೆಯಿರುವ ಭಾರತದಲ್ಲಿ ಸಾರ್ವಜನಿಕ ಸಂಸ್ಥೆಗಳಲ್ಲಿ ಪಾರಂಪರಿಕವಾಗಿ ವಿವಾದ ಗ್ರಸ್ತವಾಗಿರುವ, ಕೇಂದ್ರೀಯ ಬ್ಯಾಂಕ್‌ನಲ್ಲಿ ಸಂಶೋಧನೆಯ ಗುಣಮಟ್ಟ ಹೆಚ್ಚಿಸಲು ಆರ್‌ಬಿಐಯ ಹೊರಗಿನ ವ್ಯಕ್ತಿಗಳನ್ನು ನೇಮಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದ್ದಾರೆ. ರಾಜನ್‌ರ 3 ವರ್ಷಗಳ ಅಧಿಕಾರಾವಧಿ ಸೆಪ್ಟಂಬರ್‌ಗೆ ಕೊನೆಗೊಳ್ಳಲಿದೆ. ಆದಾಗ್ಯೂ, ಮಾರುಕಟ್ಟೆಗಳು ಹೆಚ್ಚುವರಿ 2 ವರ್ಷಗಳಿಗೆ ಅವರು ಮರು ನೇಮಕಗೊಳ್ಳುವರೇ ಎಂಬುದನ್ನು ಕಾದು ನೋಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News