ಕರೆಂಕಿಲ: ಮನೆ ಬೆಂಕಿಗಾಹುತಿ
ವಿಟ್ಲ, ಜ.14: ಆಕಸ್ಮಿಕದಿಂದ ಮನೆಯೊಂದು ಅಗ್ನಿಗಾಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ಕರೆಂಕಿಲ ಎಂಬಲ್ಲಿ ಗುರುವಾರ ಸಂಭವಿಸಿದೆ.
ಸ್ಥಳೀಯ ನಿವಾಸಿ ನಾರಾಯಣ ಪೂಜಾರಿ ಎಂಬವರ ಮನೆಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದ್ದು, ಅನಾಹುತಕ್ಕೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮನೆ ಮಾಲಕ ನಾರಾಯಣ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದು, ಅವರ ಪತ್ನಿ ಮನೆಯಿಂದ ಹೊರಗಡೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮನೆಯ ಮೇಲ್ಛಾವಣಿಯ ಹೆಂಚು, ಮರದ ಪಕ್ಕಾಸು ಸಹಿತ ವಸ್ತ್ರಗಳು, ಪಾತ್ರೆಗಳು, ಟಿವಿ, ಕಪಾಟು ಮೊದಲಾದ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮಗೊಂಡಿದೆ. ಘಟನೆಯಿಂದ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಅವಘಡದಿಂದ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ರಾಮ ಕರಣಿಕ ಪ್ರವೀಣ್ ಹಾಗೂ ಕಂದಾಯ ಅಧಿಕಾರಿ ಆಸಿಫ್ ಇಕ್ಬಾಲ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.