×
Ad

ಪರ್ಯಾಯ: ಕ್ರೈಸ್ತರಿಂದ ಹೊರೆಕಾಣಿಕೆ ಸಮರ್ಪಣೆ

Update: 2016-01-14 23:58 IST

ಉಡುಪಿ, ಜ.14: ಪೇಜಾವರ ಸ್ವಾಮೀಜಿಯ ಐದನೆ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಧರ್ಮಪ್ರಾಂತದ ಕ್ರೈಸ್ತರು ಗುರುವಾರ ಹಸಿರು ಹೊರೆಕಾಣಿಕೆ ಸಮರ್ಪಿಸಿದರು.

ನಗರದ ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 30ಕ್ಕೂ ಅಧಿಕ ವಾಹನಗಳು ಭಾಗವಹಿಸಿದ್ದವು. ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸಭಾ, ಮಹಿಳಾ ಸಂಘಟನೆ, ಭಾರತೀಯ ಕೆಥೊಲಿಕ್ ಯುವ ಸಂಚಾಲನ, ಯುವ ವಿದ್ಯಾರ್ಥಿ ಸಂಚಾಲನ, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಸಹಕಾರ ನೀಡಿದ್ದವು.

ಉಡುಪಿ ಧರ್ಮಪ್ರಾಂತ ಕೆಥೊಲಿಕ್ ಸಭಾಧ್ಯಕ್ಷ ವಿಲಿಯಂ ಮಚಾದೊ, ಕಾರ್ಯದರ್ಶಿ ಆಲಿಸ್ ರೊಡ್ರಿಗಸ್, ಐಸಿವೈಎಂ ನಿರ್ದೇಶಕ ವಂ.ಎಡ್ವಿನ್ ಡಿಸೋಜ, ಅಧ್ಯಕ್ಷ ಡೆರಿಕ್ ಮಸ್ಕರೇನ್ಹಸ್, ವೈಸಿಎಸ್‌ನ ಪ್ರಿಯಾಂಕಾ, ಮಹಿಳಾ ಸಂಘಟನೆಯ ಸ್ಮೀತಾ ರೇಂಜರ್, ಕೆಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ಕಿರಣ್ ಎಲ್‌ರೋಯ್ ಕ್ರಾಸ್ತಾ, ಆಲ್ಫೋನ್ಸ್ ಡಿಕೊಸ್ತ, ವಾಲ್ಟರ್ ಸಿರಿಲ್ ಪಿಂಟೊ, ಜೆರಾಲ್ಡ್ ಫೆರ್ನಾಂಡಿಸ್, ಮೆಲ್ವಿನ್ ಆರಾನ್ಹಾ, ಜೊಸೇಫ್ ರೆಬೆಲ್ಲೊ ಕಲ್ಯಾಣಪುರ, ಲೂಯಿಸ್ ಲೋಬೊ, ಹೆನ್ರಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News