×
Ad

ರಾಷ್ಟ್ರಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಶಿಪ್ ಲಾಂಛನ ಅನಾವರಣ

Update: 2016-01-15 00:05 IST

25 ಲಕ್ಷ ರೂ. ವೆಚ್ಚ,

ಹೊನಲು ಬೆಳಕಿನಲ್ಲಿ ಸ್ಪರ್ಧೆ
ಮಂಗಳೂರು, ಜ.14: ನಗರದ ನೆಹರೂ ಮೈದಾನದಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ 64ನೆ ರಾಷ್ಟ್ರಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನ ಲಾಂಛನವನ್ನು ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅನಾವರಣಗೊ ಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಹದಾರ್ಢ್ಯಪಟುಗಳನ್ನು ಪ್ರೋತ್ಸಾಹಿಸುವ ಹಾಗೂ ದೇಶದ ವಿವಿಧ ರಾಜ್ಯಗಳ ದೇಹದಾರ್ಢ್ಯ ಸ್ಪರ್ಧಿಗಳನ್ನು ನಗರದ ಜನರಿಗೆ ಪರಿಚಯಿಸುವಲ್ಲಿ ಈ ಕ್ರೀಡಾಕೂಟ ಮಹತ್ವದ್ದಾಗಲಿದೆ. 25 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುತ್ತಿರುವ ಈ ಚಾಂಪಿಯನ್‌ಶಿಪ್ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ತಿಳಿಸಿದರು. ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆ ಯಲ್ಲಿ ವಿಜೇತರಾದ ದೇಹದಾರ್ಢ್ಯ ಪಟುಗಳು ಈ ಸ್ಪರ್ಧೆಯಲ್ಲಿ ಭಾಗ ವಹಿಸುತ್ತಿದ್ದು, ಈ ಕ್ರೀಡಾಕೂಟ ಕ್ಕಾಗಿ ಸಚಿವ ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿ ಸಲಾಗಿದೆ ಎಂದು ಕ್ರೀಡಾಕೂಟದ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಮಿಸ್ಟರ್ ವರ್ಲ್ಡ್ ರೇಮಂಡ್ ಡಿಸೋಜ ಹಾಗೂ ಜಿಲ್ಲೆಯ ಇತರ ಹಲವಾರು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ದೇಹದಾರ್ಢ್ಯಪಟುಗಳು ಉಪಸ್ಥಿತರಿದ್ದರು.

ಆರು ವಿಭಾಗಗಳಲ್ಲಿ ಸ್ಪರ್ಧೆ
64ನೆ ದೇಹದಾರ್ಢ್ಯ ಚಾಂಪಿಯನ್‌ಶಿಪ್ 6 ವಿಭಾಗಗಳಲ್ಲಿ ನಡೆಯಲಿದೆ. ಎಲ್ಲ ವಯೋಮಿತಿಯವರಿಗಾಗಿ ಭಾರತ್ ಉದಯ್ ಚಾಂಪಿಯನ್‌ಶಿಪ್, 18ರಿಂದ 21 ವರ್ಷ ವಯೋಮಿತಿಯವರಿಗಾಗಿ ಭಾರತ್ ಕಿಶೋರ್, 24 ವರ್ಷದೊಳಗಿನವರಿಗಾಗಿ ಭಾರತ್ ಕುಮಾರ್, 25 ವರ್ಷ ಮೇಲ್ಪಟ್ಟವರಿಗಾಗಿ ಭಾರತ್ ಶ್ರೀ ಹಾಗೂ 40ರಿಂದ 60 ವರ್ಷದವರಿಗಾಗಿ ಭಾರತ್ ಕೇಸರಿ ಚಾಂಪಿಯನ್‌ಶಿಪ್‌ಗಳು ನಡೆಯಲಿವೆ. ಭಾರತದಲ್ಲಿ ದ್ವಿತೀಯ ಬಾರಿಗೆ ಮಿಸ್ಟರ್ ಫಿಟ್ನೆೆಸ್ ಸ್ಪರ್ಧೆ ಪುರುಷರು ಮತ್ತು ಮಹಿಳೆಯರಿಗಾಗಿ ನಡೆಯಲಿದೆ. ಮಣಿಪುರದ ಮೂವರು ಮಹಿಳಾ ದೇಹದಾರ್ಢ್ಯ ಪಟುಗಳು ಫಿಟ್ನೆಸ್ ಕುರಿತು ಪ್ರದರ್ಶನವನ್ನೂ ನೀಡಲಿದ್ದಾರೆ ಎಂದು ಭಾರತೀಯ ಫಿಟ್ನೆೆಸ್ ಆ್ಯಂಡ್ ಬಾಡಿ ಬಿಲ್ಡಿಂಗ್‌ನ ಮಹಾ ಕಾರ್ಯದರ್ಶಿ ಪಿ.ಎಸ್.ಬಿ. ನಾಯ್ಡು ಮಾಹಿತಿ ನೀಡಿದರು. 

ಜ.23-31: ಕರಾವಳಿ ಉತ್ಸವ
ಜನವರಿ 23ರಿಂದ 31ರವರೆಗೆ ಕರಾವಳಿ ಉತ್ಸವ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಕದ್ರಿ ಉದ್ಯಾನವನದಲ್ಲಿ ನಡೆಯ ಲಿರುವ ಫಲಪುಷ್ಪ ಪ್ರದರ್ಶನದ ಜೊತೆಯಲ್ಲೇ ಕರಾವಳಿ ಉತ್ಸವವೂ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.
-ರಮಾನಾಥ ರೈ, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News