×
Ad

ಕಾಸರಗೋಡು : ಸಿಪಿಎಂ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2016-01-15 09:17 IST

ಕಾಸರಗೋಡು : ಸಿಪಿಎಂ - ಬಿಜೆಪಿ ಕಾರ್ಯಕರ್ತರ ನಡುವೆ  ಘರ್ಷಣೆ ನಡೆದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪಳ್ಳಿಕೆರೆ ಯಲ್ಲಿ  ಗುರುವಾರ ರಾತ್ರಿ ನಡೆದಿದ್ದು , ಎಂಟು ಮಂದಿ ಗಾಯಗೊಂಡಿದ್ದಾರೆ.

ಸಿಪಿಎಂ ಕಾರ್ಯಕರ್ತರಾದ  ಶಿಜು , ರಿತೇಶ್ , ಶಿಬುಲಾಲ್ , ಧನೇಶ್, ಬಿಜೆಪಿ ಕಾರ್ಯಕರ್ತರಾದ  ಪ್ರದೀಪ್ , ಅನಿಲ್ , ಸಜಿತ್ ,ಅನಿಲ್ ಕುಮಾರ್ ಗಾಯಗೊಂಡಿದ್ದಾರೆ . ಈ ಪೈಕಿ  ಪ್ರದೀಪ್ ಮತ್ತು   ಸಜಿತ್ ನನ್ನು   ಮಂಗಳೂರು ಆಸ್ಪತ್ರೆಗೆ  ದಾಖಲಿಸಲಾಗಿದೆ.

ಪಕ್ಷದ ಧ್ವಜ ಹಾಗೂ ತೋರಣ ಕಟ್ಟುವ   ವಿಚಾರ  ಘರ್ಷಣೆಗೆ  ಕಾರಣ ಎನ್ನಲಾಗಿದೆ.
ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News