ಎರಡನೆ ಏಕದಿನ :ಆಸ್ಟ್ರೇಲಿಯಕ್ಕೆ ಏಳು ವಿಕೆಟ್‌ಗಳ ಜಯ

Update: 2016-01-15 18:58 GMT

ಬ್ರಿಸ್ಬೇನ್, ಜ.15: ಆಸ್ಟ್ರೇಲಿಯ ತಂಡ ಇಂದು ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದೆ.

 ಇದರೊಂದಿಗೆ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಸತತ ಎರಡನೆ ಜಯ ಗಳಿಸಿದೆ.
ಪರ್ತ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮ ಶತಕದ ನೆರವಿನಲ್ಲಿ 310 ರನ್‌ಗಳ ಗೆಲುವಿನ ಸವಾಲನ್ನು ವಿಧಿಸಿದ್ದರೂ ಆಸ್ಟ್ರೇಲಿಯ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತ್ತು. ಇಂದು ಮತ್ತೆ ರೋಹಿತ್ ಶತಕ ದಾಖಲಿಸಿ ಆಸ್ಟ್ರೇಲಿಯಕ್ಕೆ 309 ರನ್‌ಗಳ ಸವಾಲನ್ನು ನೀಡಿದ್ದರೂ ಆಸ್ಟ್ರೇಲಿಯಕ್ಕೆ ಗೆಲುವು ಕಷ್ಟವಾಗಲಿಲ್ಲ. ಅದು ಇನ್ನೂ ಆರು ಎಸೆತಗಳು ಬಾಕಿ ಉಳಿಸಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಎರಡೂ ಪಂದ್ಯಗಳಲ್ಲೂ ಜಾರ್ಜ್ ಬೈಲಿ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿರುವುದು ವಿಶೇಷ. ಇದರೊಂದಿಗೆ ಆಸ್ಟ್ರೇಲಿಯ 2-0 ಮುನ್ನಡೆ ಸಾಧಿಸಿದ್ದು, ರವಿವಾರ ನಡೆಯುವ ಮೂರನೆ ಪಂದ್ಯದಲ್ಲಿ ಆಸ್ಟ್ರೇಲಿಯ ಜಯ ಗಳಿಸಿದರೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ಆಸ್ಟ್ರೇಲಿಯದ ಮಡಿಲಿಗೆ ಕೈ ಜಾರುತ್ತದೆ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 21ಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಎರಡನೆ ಪಂದ್ಯದಲ್ಲಿ ಆ್ಯರೊನ್ ಫಿಂಚ್ ಶಾನ್ ಮಾರ್ಷ್ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 145 ರನ್ ಗಳಿಸುವ ಮೂಲಕ ಭದ್ರವಾದ ಅಡಿಪಾಯ ಹಾಕಿಕೊಟ್ಟರು.
 
 ಫಿಂಚ್ 71 ರನ್ (97ನಿ, 81ಎ,7ಬೌ,1ಸಿ) ಗಳಿಸಿ ನಿರ್ಗಮಿಸಿರು. ಎರಡನೆ ವಿಕೆಟ್‌ಗೆ ನಾಯಕ ಸ್ಟೀವನ್ ಸ್ಮಿತ್ ಅವರು ಮಾರ್ಷ್‌ಗೆ ಜೊತೆಯಾದರು. ತಂಡದ ಸ್ಕೋರ್ 29.5 ಓವರ್‌ಗಳಲ್ಲಿ 166ಕ್ಕೆ ತಲುಪುವಾಗ ಮಾರ್ಷ್ ನಿರ್ಗಮಿಸಿದರು. ಮಾರ್ಷ್ 71 ರನ್(121ನಿ, 84ಎ, 5ಬೌ) ಗಳಿಸಿದರು. ಮಾರ್ಷ್ ನಾಲ್ಕು ಜೀವದಾನ ಪಡೆದಿದ್ದರು. ಇದು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.
ಸ್ಮಿತ್ ಶತಕ ಗಳಿಸಲಿಲ್ಲ:  ಯಾದವ್ ಅವರ ಬ್ಯಾಟಿಂಗ್‌ನ್ನು 46ರಲ್ಲಿ ಕೊನೆಗ್ಢೊಳಿಸಿದರು. ಮೂರನೆ ವಿಕೆಟ್‌ಗೆ ಜಾರ್ಜ್ ಬೈಲಿ ಮತ್ತು ಸ್ಮಿತ್ 11 ಓವರ್‌ಗಳಲ್ಲಿ 7.9 ಸರಾಸರಿಯಂತೆ 78 ರನ್ ಸೇರಿದರು. ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಬೈಲಿ ಮತ್ತು ಮಾಕ್ಢೃ್‌ಸವೆಲ್ 8.1 ಓವರ್‌ಗಳಲ್ಲಿ 7.95 ಸರಾಸರಿಯಂತೆ 65 ರನ್ ಸೇರಿಸಿ ಭಾರಚ ಕೈಯಲ್ಲಿದ್ದ ಗೆಲುವಿನ ಹಾರ ಕಿತ್ತುಕೊಂಡರು. ಬೈಲಿ ಔಟಾಗದೆ 76 ರನ್(78ನಿ, 58ಎ,6ಬೌ,1ಸಿ) ಮತ್ತು ಮ್ಯಾಕ್ಸ್‌ವೆಲ್ 26ರನ್(34ನಿ, 25ಎ, 1ಬೌ) ಗಳಿಸಿದರು.
  ಭಾರತದ ಬೌಲರ್‌ಗಳು ಕೈ ಸುಟ್ಟುಕೊಂಡರು. ಇಶಾಂತ್ ಶರ್ಮ, ಉಮೇಶ್ ಯಾದವ್, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು. ಸ್ರಾನ್, ಅಶ್ವಿನ್ ಮತ್ತು ಕೊಹ್ಲಿಗೆ ವಿಕೆಟ್ ದೊರೆಯಲಿಲ್ಲ. ಇದಕ್ಕೂ ಮೊದಲು ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ದಾಖಲಿಸಿದ ಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿದೆ.
 ರೋಹಿತ್ ಶರ್ಮ 124 ರನ್ (127 ಎ, 11ಬೌ,3ಸಿ) ಗಳಿಸಿದರು. ಸರಣಿಯಲ್ಲಿ ಸತತ ಎರಡನೆ ಶತಕ ದಾಖಲಿಸಿದ ರೋಹಿತ್ ಶರ್ಮ 112 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 10ನೆ ಶತಕ ದಾಖಲಿಸಿದರು.    
 ಅಜಿಂಕ್ಯ ರಹಾನೆ 89 ರನ್, ವಿರಾಟ್ ಕೊಹ್ಲಿ 59 ರನ್, ಎಂಎಸ್ ಧೋನಿ 11 ರನ್, ಶಿಖರ್ ಧವನ್ 6 ರನ್, ಎಂಕೆ ಪಾಂಡೆ 6 ರನ್, ಜಡೇಜ 5 ರನ್, ಅಶ್ವಿನ್ 1ರನ್ ಗಳಿಸಿ ಔಟಾದರು. ಎರಡನೆ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ಕೊಹ್ಲಿ 125 ರನ್, ಮೂರನೆ ವಿಕೆಟ್‌ಗೆ ರೋಹಿತ್ ಮತ್ತು ರಹಾನೆ 124 ರನ್ ಗಳಿಸಿ ತಂಡದ ಸ್ಕೋರ್ 300ರ ಗಡಿ ದಾಟಲು ನೆರವಾದರು. ಆಸ್ಟ್ರೇಲಿಯದ ಫಾಕ್ನರ್ 64 ಕ್ಕೆ 2, ಪ್ಯಾರಿಸ್, ಹೇಸ್ಟಿಂಗ್ಸ್ , ಬೊಲೆಂಡ್ ತಲಾ 1 ವಿಕೆಟ್ ಪಡೆದರು. ಧೋನಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 308/8
ರೋಹಿತ್ ಶರ್ಮ ರನೌಟ್(ಫಾಕ್ನರ್) 124
ಶಿಖರ್ ಧವನ್ ಸಿ ವಾಡೆ ಬಿ ಪ್ಯಾರಿಸ್ 6
ವಿರಾಟ್ ಕೊಹ್ಲಿ ರನೌಟ್(ರಿಚರ್ಡ್‌ಸನ್/ವಾಡೆ) 59
ಅಜಿಂಕ್ಯ ರಹಾನೆ ಸಿ ಸ್ಮಿತ್ ಬಿ ಫಾಕ್ನರ್ 89
ಎಂಎಸ್ ಧೋನಿ ಸಿ ಮ್ಯಾಕ್ಸ್‌ವೆಲ್ ಬಿ ಬೊಲೆಂಡ್ 11
ಮನೀಷ್ ಪಾಂಡೆ ಸಿ ಪ್ಯಾರಿಸ್ ಬಿ ಫಾಕ್ನರ್ 6
ರವೀಂದ್ರ ಜಡೇಜ ರನೌಟ್(ಹೇಸ್ಟಿಂಗ್ಸ್) 5
ಆರ್.ಅಶ್ವಿನ್ ಸಿ ಬೊಲೆಂಡ್ ಬಿ ಹೇಸ್ಟಿಂಗ್ಸ್ 1
ಉಮೇಶ್ ಯಾದವ್ ಔಟಾಗದೆ 0
ಇತರ 7
ವಿಕೆಟ್ ಪತನ: 1-9, 2-134, 3-255, 4-276, 5-298, 6-302, 7-306, 8-308.

ಬೌಲಿಂಗ್ ವಿವರ: ಪ್ಯಾರಿಸ್ 8-0-40-1
ರಿಚರ್ಡ್‌ಸನ್ 8-1-61-0
ಹೇಸ್ಟಿಂಗ್ಸ್ 8-0-46-1
ಬೊಲೆಂಡ್ 10-0-64-1
ಮ್ಯಾಕ್ಸ್‌ವೆಲ್ 6-0-33-0
ಫಾಕ್ನರ್ 10-0-64-2
ಆಸ್ಟ್ರೇಲಿಯ: 49 ಓವರ್‌ಗಳಲ್ಲಿ 309/3
ಆ್ಯರೊನ್ ಫಿಂಚ್ ಸಿ ರಹಾನೆ ಬಿ ಜಡೇಜ 71
ಶಾನ್ ಮಾರ್ಷ್ ಸಿ ಕೊಹ್ಲಿ ಬಿ ಶರ್ಮ 71
ಸ್ಟೀವನ್ ಸ್ಮಿತ್ ಬಿ ಯಾದವ್ 46
ಜಾರ್ಜ್ ಬೈಲಿ ಔಟಾಗದೆ 76
ಮ್ಯಾಕ್ಸ್‌ವೆಲ್ ಔಟಾಗದೆ 26
ಇತರ 19
ವಿಕೆಟ್‌ಪತನ: 1-145, 2-166, 3-244

ಬೌಲಿಂಗ್: ಬರಿಂದರ್ ಸ್ರಾನ್ 9-1-51-0
ಇಶಾಂತ್ ಶರ್ಮ 10-0-60-1
ಉಮೇಶ್ ಯಾದವ್ 10-0-74-1
ರವೀಂದ್ರ ಜಡೇಜ 9-0-50-1
ಆರ್. ಅಶ್ವಿನ್ 10-0-60-0
ವಿರಾಟ್ ಕೊಹ್ಲಿ 1-0-7-0

ಪಂದ್ಯಶ್ರೇಷ್ಠ: ರೋಹಿತ್ ಶರ್ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News