×
Ad

ಜ.16ರಂದು ಪಾಂಡವರಕಲ್ಲಿನಲ್ಲಿ ಮಿಲಾದ್ ಸಂದೇಶ ಕಾರ್ಯಕ್ರಮ

Update: 2016-01-15 11:44 IST

ಪೂಂಜಾಲಕಟ್ಟೆ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲೆ ಹಾಗೂ ಪಾಪ್ತುಲರ್ ಫ್ರಂಟ್ ಆಫ್ ಇಂಡಿಯಾ ಪುಂಜಾಲಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಮಿಲಾದ್ ಸಂದೇಶ ಕಾರ್ಯಕ್ರಮದ ಪ್ರಯುಕ್ತ 'ಐಕ್ಯತೆ ಕಾಲದ ಬೇಡಿಕೆ' ಕಾರ್ಯಕ್ರಮವು ಶನಿವಾರ ಸಂಜೆ 7 ಗಂಟೆಗೆ ಪಾಂಡವರಕಲ್ಲು ಮಸೀದಿ ಬಳಿ ನಡೆಯಲಿದೆ. 

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಜ್ಯ ಉಪಾಧ್ಯಕ್ಷ ಅಸ್ಸಯ್ಯದ್ ಇಬ್ರಾಹೀಂ ಅಲ್ ಹಾದಿ ತಂಙಳ್ ಉದ್ಘಾಟಿಸಲಿದ್ದಾರೆ. 
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಷ್ಟ್ರೀಯ ಸಮಿತಿ ಸದಸ್ಯ ಫೈಝಲ್ ಮೌಲವಿ ಮಲಪ್ಪುರಂ ಮುಖ್ಯ ಭಾಷಣ ಮಾಡಲಿದ್ದಾರೆ. 

ಈ ಸಂದರ್ಭ ಪಿಎಫ್ಐ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಟಿ.ಎಸ್. ಮುಹಮ್ಮದ್ ಹನೀಫ್, ಬದ್ರಿಯಾ ಜುಮಾ ಮಸೀದಿ ಪಾಂಡವರಕಲ್ಲು ಅಧ್ಯಕ್ಷ ಬಿ. ಅಬ್ದುಲ್ಲಾ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬಂಗೇರಕಟ್ಟೆ, ಬಡಗಕಜೇಕಾರು ಗ್ರಾ.ಪಂ. ಸದಸ್ಯ ಅತಾವುಲ್ಲಾ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ಪಿಎಫ್ಐ ಮಡಂತ್ಯಾರ್ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ಪುಂಜಾಲಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News