×
Ad

ಯಡಿಯೂರಪ್ಪ, ಶೋಭಾರಿಗೆ ಕೆಜೆಪಿಯ ಅಧ್ಯಕ್ಷರಿಂದ ಸವಾಲು

Update: 2016-01-15 15:02 IST

ಉಡುಪಿ: ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಂಸದೆ ಶೋಭಾ ಕಾರಂದ್ಲಾಜೆ ಕೇರಳದಲ್ಲಿ ಮದುವೆಯಾಗಿದ್ದು, ಬಳಿಕ ಜೋತಿಷಿಯೊಬ್ಬರ ಸಲಹೆಯಂತೆ ತಿರುಪತಿಯಲ್ಲಿ ಮರು ಮದುವೆಯಾಗಿದ್ದಾರೆ ಈ ಬಗ್ಗೆ ತನ್ನ ಬಳಿ ಪುರಾವೆ ಇದೆ ಎಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ. 

ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಶೋಭಾ ಅವರ ಮರು ಮದುವೆಯ ಸಿಡಿಯನ್ನು ಯಡುಯೂರಪ್ಪರ ಆತ್ಪ ಸಹಾಯಕರಾಗಿದ್ದ ಸಿದ್ದಲಿಂಗ ಸ್ವಾಮಿ ಅವರೇ ಸ್ವತಃ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ತನಗೆ ಯಡಿಯೂರಪ್ಪ ಅವರಿಂದ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಝಡ್ ಪ್ಲಸ್ ರಕ್ಷಣೆಯನ್ನು ಒದಗಿಸಿದರೆ ತಾನು ಈ ಸಿಡಿಯನ್ನು ಬಹಿರಂಗ ಪಡಿಸಲು ಸಿದ್ದನಿದ್ದೇನೆ ಎಂದರು. ಈ ಕುರಿತು ಇನ್ನಷ್ಟು ಪುರಾವೆ ಕೇಳಿದಾಗ ಬೇಕಿದ್ದರೆ ತಾನು ಅವರಿಗೆ ಸವಾಲು ಹಾಕುತ್ತೇನೆ. ಯಡಿಯೂರಪ್ಪ ಹಾಗೂ ಶೋಭಾ ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಮುಂದೆ ತಾವು ಮದುವೆಯಾಗಿಲ್ಲ ಎಂದು ಪ್ರಮಾಣ ಮಾಡಲಿ ಆಗ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಘೋಷಿಸಿದರು.

ಯಡುಯೂರಪ್ಪ ಮುಖ್ಯ ಮಂತ್ರಿ ಯಾಗಿದ್ದಾಗ ಮೈಸೂರು ಜಿಲ್ಲೆಯ ಉಸ್ತುವಾರಿಗೆ ಸಂಬಂಧಿಸಿದಂತೆ ಶೋಭಾ ಮತ್ತು ಸಿದ್ದಲಿಂಗ ಸ್ವಾಮಿ ನಡುವೆ ಜಗಳ ತಾರಕಕ್ಕೇರಿದ್ದು ಈ ಸಂದರ್ಭ ಸಿದ್ದಲಿಂಗ ಸ್ವಾಮಿ ತನಗೆ ಅವರ ಮದುವೆಯ ಸಿಡಿಯನ್ನು ನೀಡಿದ್ದರು.

ಶೋಭಾ ಮತ್ತು ಯಡಿಯೂರಪ್ಪ ಅವರ ಮರು ಮದುವೆ ಬೆಳಗ್ಗಿನ ಜಾವ ನಡೆದಿತ್ತು ಎಂದು ಅವರು ಹೇಳಿದರು. 
ಈ ನಡುವೆ ಕೆಜೆಪಿ ಪಕ್ಷದ ವಿಷಯಕ್ಕೆ ಸಂಬಂಧಿ ಉಂಟಾದ ವಿವಾದಲ್ಲಿ ಯಡಿಯೂರಪ್ಪ ಗೂಂಡಾಗಳ ಮೂಲಕ ತನ್ನನ್ನು ಅಪಹರಿಸಿ 7 ದಿನಗಳ ಕಾಲ ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದರು. ಗೂಂಡಾಗಳು ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಉತ್ತರ ಭಾರತಕ್ಕೆ ಕರೆದೊಯ್ದು ವಾರದ ಬಳಿಕ ರಾಜಸ್ತಾನ - ದೆಹಲಿ ಗಡಿಭಾಗದ ಭದ್ರಾಪುರ ಠಾಣಾ ವ್ಯಾಪ್ತಿಯಲ್ಲಿ ತನ್ನನ್ನು ಬಿಡುಗಡೆ ಗೊಳಿಸಿದ್ದರು. ಈ ಸಂಬಂಧ ತಾನು ಭದ್ರಾಪುರ ಠಾಣೆಯಲ್ಲಿ ಕೇಸು ದಾಖಲಿಸಿದ್ದೇನೆ. ಆದರೆ ತನ್ನನ್ನು ಅಪಹರಿಸಿದ ಬೆಂಗಳೂರಿನಲ್ಲಿ ಪೊಲೀಸರು ಕೇಸನ್ನು ದಾಖಲಿಸಲು ನಿರಾಕರಿಸಿದ್ದರು ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News