×
Ad

ಟ್ಯಾಲೆಂಟ್ ದಶಮಾನೋತ್ಸವ ಸಂಭ್ರಮ-ಸೇವಾ ಉತ್ಸವಕ್ಕೆ ಚಾಲನೆ

Update: 2016-01-15 17:09 IST

ಮಂಗಳೂರು,15:ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ದಶಮೋನೋತ್ಸದ ಅಂಗವಾಗಿ ಹಮ್ಮಿಕೊಂಡ ಸೇವಾ ಉತ್ಸವ 2016ನ್ನು ನಗರದ ಪುರಭವನದಲ್ಲಿ ದ.ಕ ಜಿಲ್ಲಾ ಖಾಜಿ ಅಲ್‌ಹಾಜ್ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಇಂದು ಉದ್ಘಾಟಿಸಿದರು.


ಸಮುದಾಯದಲ್ಲಿ ಅತ್ಯಂತ ಕಡು ಬಡವರ ನೈಜ ಚಿತ್ರಣವನ್ನು ಅವರು ಇರುವ ಕಡೆ ಹೋಗಿ ನೋಡಲು ನನಗೆ ಟ್ಯಾಲೆಂಟ್ ಫೌಂಡೇಶನ್ನಿನ ಸದಸ್ಯರು ಅವಕಾಶ ಮಾಡಿ ಕೊಡುವ ಮೂಲಕ ಜಿಲ್ಲೆಯ ಬಡಜನರ ಕಷ್ಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ.ಟ್ಯಾಲೆಂಟ್‌ನ ಸದಸ್ಯರು ಸಮುದಾಯಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ,ಸಹಾಯ ಮಾಡುವ ಹಲವು ಉತ್ತಮ ಕೆಲಸದಲ್ಲಿ ತೊಡಗಿದ್ದಾರೆ.ಈ ದಾರಿಯಲ್ಲಿ ಇನ್ನಷ್ಟು ಬಡ ಜನರಿಗೆ ಸಹಾಯವಾಗುವ ಕೆಲಸವನ್ನು ಮಾಡುವಂತಾಗಲಿ ಎಂದು ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ಸ್ಥಾಪಕರು ಹಾಗೂ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ವಹಿಸಿ ಮಾತನಾಡುತ್ತಾ,ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ನಿನ ಕೆಲಸ ಕಾರ್ಯಗಳಲ್ಲಿ ಸಹಾಯ ನೀಡುತ್ತಾ ಬಡಜನರ ಕಷ್ಟಗಳ ನಿವಾರಣೆಗೆ ಸ್ಪಂಧಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸಮಾಜದ ಜನರು ಸಂಘಟಿತರಾಗಿ ಸಮಾಜದ ಹಿತಕ್ಕಾಗಿ ದುಡಿದಾಗ ನಮ್ಮ ಸುತ್ತ ಮತ್ತಲ ಹೆಚ್ಚು ಜನರ ಕಷ್ಟಗಳನ್ನು ಪರಿಹರಿಸಲು ಸಾಧ್ಯ.ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ .ರಶೀದ್ ಹಾಜಿ ಟ್ಯಾಲೆಂಟ್ ಫೌಂಡೇಶನ್ನಿನ ಸ್ಮರಣ ಸಂಚಕೆಯನ್ನು ಬಿಡುಗಡೆಗೊಳಿಸಿ ಸಂಸ್ಥೆಯ ವತಿಯಿಂದ ಐಎಎಸ್,ಕೆಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಸಹಾಯ ನೀಡುವ ಸರಕಾರದ ಹಾಗೂ ವಕ್ಫ್ ಮಂಡಳಿಯ ಬಗ್ಗೆಯೂ ಜನರಿಗೆ ಮಾಹಿತಿ ನೀಡವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಯೆನೆಪೊಯ ಮುಹಮ್ಮದ್ ಕುಂಞ ಸಂಸ್ಥೆಯ ಸಾಧನೆಗೆ ಶ್ಲಾಘಿಸಿ ಶುಭ ಹಾರೈಸಿದರು.,ಮೂಡಾ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್,ದ.ಕ ಉಡುಪಿ ಜಿಲ್ಲಾ ಜಮೀಯತುಲ್ ಪಲ್ಹಾಹ್ ಅಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್,ಉದ್ಯಮಿಗಳಾದ ಅಸ್ಗರ್ ಹಾಜಿ ಶಿರಸಿಯಲ್ಲಿ ಟ್ಯಾಲೆಂಟ್ ಸಂಸ್ಥೆಯ ಮೂಲಕ ನಡೆದ ಸೇವಾಚಟುವಟಿಕೆಯನ್ನು ಶ್ಲಾಘಿಸಿದರು.ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ ಮಾತನಾಡುತ್ತಾ ಸಂಸ್ಥೆ ಗ್ರಾಮೀಣ ಪ್ರದೇಶದ ಜನರಿಗೆ ನೀಡಿದ ಸೇವೆಯನ್ನು ಸ್ಮರಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು.ಉದ್ಯಮಿ ಮುಹಮ್ಮದ್ ಹ್ಯಾರೀಸ್,ಹಿದಾಯ ಫೌಂಡೇಶನ್ನಿನ ಸ್ಥಾಪಕ ಖಾಸಿಂ ಅಹಮ್ಮದ್,ಮನಪಾ ಸದಸ್ಯ ಅಬ್ದುಲ್ ರವೂಫ್ ಬಜಾಲ್,ದ.ಕ ಜಿಲ್ಲಾ ಫುಟ್‌ಬಾಲ್ ಎಸೋಸಿಯೇಶನ್ನಿನ ಅಧ್ಯಕ್ಷ ಡಿ.ಎಂ.ಅಸ್ಲಾಂ,ಟ್ಯಾಲೆಂಟ್ ಫೌಂಡೇಶನ್ನಿನ ಉಪಾಧ್ಯಕ್ಷ ಅಶ್ರಫ್ ಜಿ.ಬಾವ,ಸಲಹೆಗಾರರಾದ ಸುಲೇಮಾನ್ ಶೇಖ್ ಬೆಳುವಾಯಿ, ಅಕ್ಭರಾಲಿ,ಫೌಂಡೇಶನ್ನಿನ ಕಾರ್ಯಕಾರಿ ಸಮಿತಿ ಸದಸ್ಯ ಫತೇ ಮುಹಮ್ಮದ್, ಉದ್ಯಮಿಗಳಾದ ಮುಹಮ್ಮದ್ ಕುಂಞ ಕೊಚ್ಚಿನ್, ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.ಮಹಮ್ಮದ್ ಯು.ಬಿ ಸ್ವಾಗತಿಸಿದರು.ಸಂಸ್ಥೆಯ ಸಲಹೆಗಾರರಾದ ಮುಹಮ್ಮದ್ ರಫೀಕ್ ಮಾಸ್ಟರ್ ಪ್ರಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು.ಮುಹಮ್ಮದ್ ಜಾಸೀಮ್ ವಂದಿಸಿದರು.ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.

      ಸೇವೆಗಾಗಿ ನಡಿಗೆ (ವಾಕ್ ಥಾನ್):-ನಗರದ ನೆಹರೂ ಮೈದಾನದಿಂದ ಇಂದು ಸಂಜೆ 3 ಗಂಟೆಗೆ ಪುರಭವನದ ವರೆಗೆ ಟ್ಯಾಲೆಂಟ್ ಫೌಂಡೇಶನ್ನಿನ ನೇತೃತ್ವದಲ್ಲಿ ಸೇವೆಗಾಗಿ ನಡಿಗೆ ವಾಕ್ ಥಾನ್ ಕಾರ್ಯಕ್ರಮ ನಡೆಯಿತು.ಡಿವೈಎಸ್‌ಪಿ ಬಶೀರ್ ಅಹಮ್ಮದ್ ಚಾಲನೆ ನೀಡಿದರು.ಪುರಭವನದ ಮುಂಭಾಗದಲ್ಲಿ ಹಾಜಿ ಇಬ್ರಾಹೀಂ ಮುಸ್ಲಿಯಾರ್ ಕೃಷ್ಣಾಪುರ ಸೇವಾ ಉತ್ಸವದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ಟ್ಯಾಲೆಂಟ್ ಫೌಂಡೇಶನ್ನಿನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ದಫ್ ಕಲಾ ತಂಡಗಳ ಸದಸ್ಯರು ,ಮನಪ ಸದಸ್ಯ ಅಬ್ದುಲ್ ಲತೀಫ್ ,ಹುಸೈನ್ ಬೊಳಾರ್,ಡಿ.ಎಂ.ಅಸ್ಲಾಂ ದಫ್ ಸ್ಪರ್ಧೆಯ ತೀರ್ಪುಗಾರರಾದ ಮುಹಮ್ಮದ್ ತುಂಬೆ,ಅಬ್ದುಲ್ ಮಜೀದ್,ಶಾಹಿದ್ ದಫ್ ಎಸೋಸಿಯೇಶನ್ನಿನ ಅಧ್ಯಕ್ಷ ಅಬ್ದುಲ್ ಲತೀಫ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News