ಯುವಜನತೆಯನ್ನು ಪಕ್ಷದೆಡೆ ಸೆಳೆಯಲು ಯೋಜನೆ: ವಾರ್ತಾಭಾರತಿ ಕಚೇರಿಯಲ್ಲಿ ಪ್ರಕಾಶ್ ಕಾರಟ್
Update: 2016-01-15 19:52 IST
ಹಿರಿಯ ಸಿಪಿಎಂ ಮುಖಂಡ, ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಶುಕ್ರವಾರ ಮಂಗಳೂರಿನಲ್ಲಿ ವಾರ್ತಾಭಾರತಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಪತ್ರಿಕೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪತ್ರಿಕಾ ಬಳಗದೊಂದಿಗೆ ಬೆರೆತ ಕಾರಟ್ ಅವರು ವಾರ್ತಾಭಾರತಿಯ ಜಾತ್ಯತೀತ ನಿಲುವು ಹಾಗೂ ಜನಪರ ಕಾಳಜಿಯನ್ನು ಶ್ಲಾಘಿಸಿದರು. ಮುಂದಿನ 2 ವರ್ಷಗಳಲ್ಲಿ ದೇಶದ ಯುವ ಜನತೆಯನ್ನು ಪಕ್ಷದ ಹತ್ತಿರ ತರಲು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಿಪಿಎಂ ನಾಯಕ ಕೆ.ಆರ್. ಜಯಾನಂದ್ ಉಪಸ್ಥಿತರಿದ್ದರು