×
Ad

ಸಿರಿಯದಲ್ಲಿ ಸೇನಾ ಕಾರ್ಯಾಚರಣೆಗೆ ಒಪ್ಪಂದ: ರಶ್ಯ

Update: 2016-01-15 22:36 IST

ಮಾಸ್ಕೊ, ಜ. 15: ಸಿರಿಯದಲ್ಲಿ ಸೇನೆಯನ್ನು ನಿಯೋ ಜಿಸಲು ರಶ್ಯಕ್ಕೆ ನಿರ್ಬಂಧ ರಹಿತ ಅಧಿಕಾರ ನೀಡುವ ಒಪ್ಪಂದವೊಂದಕ್ಕೆ ಆಗಸ್ಟ್‌ನಲ್ಲಿ ಎರಡು ದೇಶಗಳು ಸಹಿ ಹಾಕಿವೆ ಎಂದು ಮಾಸ್ಕೊ ಹೇಳಿದೆ.

ಒಪ್ಪಂದಕ್ಕೆ 2015 ಆಗಸ್ಟ್ 26ರಂದು ಡಮಾಸ್ಕಸ್‌ನಲ್ಲಿ ಸಹಿ ಹಾಕಲಾಗಿತ್ತು. ಅದಾದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯ ಬಳಿಕ ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸಾದ್‌ರ ಕೋರಿಕೆಯ ಮೇರೆಗೆ ಐಸಿಸ್ ಮತ್ತು ಇತರ ‘‘ಭಯೋತ್ಪಾದಕರ’’ ವಿರುದ್ಧ ರಶ್ಯ ಬಾಂಬ್ ದಾಳಿ ಅಭಿಯಾನ ನಡೆಸಿತು.
ಒಪ್ಪಂದದ ಪಠ್ಯವನ್ನು ರಶ್ಯ ಸರಕಾರ ಗುರುವಾರ ಬಿಡುಗಡೆಗೊಳಿಸಿತು. ಅನಿರ್ದಿಷ್ಟ ಅವಧಿಯವರೆಗೆ ಒಪ್ಪಂದ ಚಾಲ್ತಿಯಲ್ಲಿರುತ್ತದೆ ಎಂದು ಪಠ್ಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News