×
Ad

ಮಿಶೆಲ್ ಚುನಾವಣೆಗೆ ನಿಲ್ಲುವುದಿಲ್ಲ: ಒಬಾಮ

Update: 2016-01-15 22:45 IST

ವಾಶಿಂಗ್ಟನ್, ಜ. 15: ಮಿಶೆಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಮುಂದೆಯೂ ಸ್ಪರ್ಧಿಸುವುದಿಲ್ಲ ಎಂದು ಅವರ ಪತಿ ಹಾಗೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ಹೇಳಿದ್ದಾರೆ.
ಅದೇ ವೇಳೆ, ಮುಂದಿನ ಜನವರಿಯಲ್ಲಿ ಅಧಿಕಾರದಿಂದ ಕೆಳಗಿಳಿದ ಬಳಿಕವೂ ಬೊಜ್ಜು ಮುಂತಾದ ಸಮಸ್ಯೆಗಳ ಪರಿ ಹಾರ ಕಾರ್ಯಕ್ಕೆ ಸಂಬಂಧಿಸಿದ ಚಟುವಟಿ ಕೆಗಳನ್ನು ಅವರು ಮುಂದುವರಿಸುತ್ತಾರೆ ಎಂದರು.
‘‘ಇನ್ನೊಂದು ಅವಧಿಗೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ವಾದುದರಿಂದ, ಪ್ರಥಮ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿ ಸುವ ಬಗ್ಗೆ ನಾವು ಯೋಚಿಸಬಹುದೇ’’ ಎಂದು ಲೂಸಿಯಾನದ ಟೌನ್‌ಹಾಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ವ್ಯಕ್ತಿಯೊಬ್ಬರು ಕೇಳಿದರು.
‘‘ಇಲ್ಲ. ನಿಮಗೆ ನಾನೊಂದು ಮಾತು ಹೇಳುತ್ತೇನೆ. ಬದುಕಿನಲ್ಲಿ 3 ಸಂಗತಿ ಗಳು ಖಚಿತ. ಅವುಗಳೆಂದರೆ, ಸಾವು, ತೆರಿಗೆಗಳು ಮತ್ತು ಮಿಶೆಲ್ ಅಧ್ಯ ಕ್ಷೀಯ ಚುನಾವಣೆಗೆ ಸ್ಪರ್ಧಿಸದಿರುವುದು’’ ಎಂದು ಒಬಾಮ ಹೇಳಿದರು.2017ರ ಜನವರಿ 20ರಂದು ಒಬಾಮರ 2ನೆ ಅವಧಿ ಮುಕ್ತಾಯಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News