×
Ad

ಇರಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

Update: 2016-01-15 23:54 IST


ಕೊಣಾಜೆ, ಜ.15: ಇರಾ ಗ್ರಾಪಂ ವ್ಯಾಪ್ತಿಯ ಇರಾ-ಮುಡಿಪು ಮುಖ್ಯ ರಸ್ತೆಯ ಇರಾ ಜಂಕ್ಷನ್‌ನಿಂದ-ಸೂತ್ರಬೈಲ್‌ವರೆಗೆ ಮತ್ತು ಇರಾ ಸೈಟ್‌ನಿಂದ-ಪರಪ್ಪುವರೆಗೆ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿಯಲ್ಲಿ ಸಚಿವ ಯು.ಟಿ.ಖಾದರ್‌ರ ಶಿಫಾರಸ್ಸಿನ ಮೇರೆಗೆ ಮಂಜೂರುಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ ಶಿಲಾನ್ಯಾಸ ನೆರವೇರಿಸಿದರು.
  ಜಿಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಚಂದ್ರಹಾಸ್ ಕರ್ಕೇರ, ಗ್ರಾಪಂ ಉಪಾಧ್ಯಕ್ಷೆ ಚಂದ್ರಾವತಿ, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬೂಬಕರ್ ಸಜಿಪ, ಪಿಡಿಒ ತಿಲಕ್ ಕುಮಾರ್, ಗುತ್ತಿಗೆದಾರ ಅಬ್ದುಲ್ ಖಾದರ್ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮಕರಣಿಕ ಎ.ಪಿ.ಭಟ್ ಸ್ವಾಗತಿಸಿದರು. ಸದಸ್ಯ ಗೋಪಾಲ ಅಶ್ವತ್ತಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News