ಐಎಫ್‌ಎಫ್‌ನಿಂದ ಸೀರತುನ್ನಬಿ ಕಾರ್ಯಕ್ರಮ
ದಮಾಮ್, ಜ.15: ಪ್ರವಾದಿ ಮುಹಮ್ಮದ್(ಸ)ರವರು ಯಾವುದೇ ಭೇದಭಾವವನ್ನು ತೋರದೆ ಸಂಪೂರ್ಣ ಮನುಕುಲಕ್ಕೆ ಶಾಂತಿಮಂತ್ರವನ್ನು ಭೋದಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಸಲೀಮ್ ಗುರುವಾಯನಕೆರೆ ಹೇಳಿದರು.
ಇಂಡಿಯನ್ ಫ್ರೆಟರ್ನಿಟಿ ಫೋರಂ ಪೂರ್ವಪ್ರಾಂತದ ವತಿಯಿಂದ ದಮಾಮ್‌ನ ಜುಬೈಲ್ ಮತ್ತು ಅಲ್‌ಹಸಾದಲ್ಲಿ ನಡೆದ ಸೀರತುನ್ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಫೋರಂನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಫೋರಂನ ಕರ್ನಾಟಕ ರಾಜ್ಯಾಧ್ಯಕ್ಷ ಇಮ್ತಿಯಾಝ್ ಮಾತನಾಡಿದರು.
ಈ ಸಂದರ್ಭ ಫತೇಹ್ ಅಲ್ ಜುಬೈಲ್‌ನ ಪ್ರಧಾನ ವ್ಯವಸ್ಥಾಪಕ ಮುಶ್ತಾಕ್ ಅಹ್ಮದ್, ಜಮೀಯತುಲ್ ಫಲಾಹ್‌ನ ಅಧ್ಯಕ್ಷ ಯು. ಫಯಾಝ್ ಅಹ್ಮದ್, ಎಸ್‌ಡಿಪಿಐ ಕಾರ್ಯನಿರ್ವಾಹಕ ಸದಸ್ಯ ಅಬೂಬಕರ್ ಕುಳಾಯಿ, ಅಹ್ಮದ್ ಬಾವಾ, ಇಂಡಿಯನ್ ಸೋಶಿಯಲ್ ಫೋರಂನ ಪ್ರಧಾನ ಕಾರ್ಯದರ್ಶಿ ಆರೀಫ್ ಜೋಕಟ್ಟೆ, ಇಂಡಿಯನ್ ಸೋಶಿಯಲ್ ಫೋರಂ ಅಲ್‌ಹಸಾ ಅಧ್ಯಕ್ಷ ಅಬ್ದುಲ್ ಖಾದರ್, ಇಂಡಿಯನ್ ಫ್ರೆಟರ್ನಿಟಿ ಫೋರಂನ ಅಧ್ಯಕ್ಷ ಇಕ್ಬಾಲ್ ಅಂಕಜಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.