ಕೇಂದ್ರ ಸರಕಾರದಿಂದ ಅಲ್ಪ ಸಂಖ್ಯಾತರ ಕಡೆಗಣನೆ
‘ನವ ಕೇರಳಯಾತ್ರೆ’ಗೆ ಚಾಲನೆ ನೀಡಿ ಸಿಪಿಎಂ ನಾಯಕ ಪ್ರಕಾಶ್ ಕಾರಟ್
ಕಾಸರಗೋಡು, ಜ.15: ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರಕಾರ ಅಲ್ಪ ಸಂಖ್ಯಾತರನ್ನು ಎರಡನೆ ದರ್ಜೆಯವರನ್ನಾಗಿ ಕಾಣುತ್ತಿದೆ ಎಂದು ಸಿಪಿಎಂ ಕೇಂದ್ರ ನಾಯಕ ಪ್ರಕಾಶ್ ಕಾರಟ್ ಹೇಳಿದರು.
ಅವರು ಶುಕ್ರವಾರ ಸಂಜೆ ಉಪ್ಪಳದಲ್ಲಿ ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತೃತ್ವದ ‘ನವಕೇರಳಯಾತ್ರೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪ್ರಕಾಶ್‌ಕಾರಟ್ ಪಕ್ಷದ ಧ್ವಜವನ್ನು ಪಿಣರಾಯಿ ವಿಜಯನ್‌ರಿಗೆ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಮೋದಿ ಸರಕಾರ ಆರೆಸ್ಸೆಸ್‌ನ ಅಜೆಂಡಾವನ್ನು ಜಾರಿಗೆ ತಂದು ಜನರನ್ನು ವಿಭಜಿಸಲು ಹೊರಟಿದೆ. ಬೀ್, ಘರ್‌ವಾಪಸಿಯಂತಹ ವಿಷಯವನ್ನು ಮುಂದಿಟ್ಟು ಕೋಮುವಾದದ ಮೂಲಕ ದೇಶವನ್ನು ವಿಭಜಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣ ವಿಲಗೊಂಡಿದೆ. ದೇಶದೊಳಗೆ ಉಗ್ರರು ನುಸುಳಿದ್ದರೂ ಈ ಬಗ್ಗೆ ನಿರ್ಲಕ್ಷ ವಹಿಸಿದೆ. 24 ಗಂಟೆಗಳ ಮೊದಲೇ ಪಂಜಾಬ್ ಪೊಲೀಸರು ಕೇಂದ್ರಕ್ಕೆ ಸಂದೇಶ ರವಾನಿಸಿದ್ದರೂ ಉಗ್ರರ ದಾಳಿಯನ್ನು ತಡೆಗಟ್ಟಲು ಮೋದಿ ಸರಕಾರ ವಿಲವಾಗಿದೆ ಎಂದರು.
ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕೊಡಿಯೇರಿ ಬಾಲಕೃಷ್ಣನ್, ಸಿಪಿಎಂ ವಿರುದ್ಧ ಕಾಂಗ್ರೆಸ್, ಬಿಜೆಪಿ ಯಾವುದೇ ರೀತಿಯ ಸುಳ್ಳು ಆರೋಪಗಳನ್ನು ಮಾಡಿದರೂ ಜನತೆ ಇದಕ್ಕೆ ಬೆಲೆ ನೀಡಲಾರರು ಎಂದು ಹೇಳಿದರು. ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಮುಖ್ಯ ಭಾಷಣ ಮಾಡಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ ಗೋವಿಂದನ್, ಕೆ.ಜೆ.ಥಾಮಸ್, ಸಂಸದ ಪಿ.ಕೆ.ಬಿಜು, ಎ. ಸಂಪತ್, ಪಿ.ಕೆ. ಝೈನಬಾ, ಶಾಸಕ ಕೆ.ಟಿ. ಜಲೀಲ್, ಜಿಲ್ಲಾ ಕಾರ್ಯದರ್ಶಿ, ಶಾಸಕ ಕೆ. ಕುಂಞಿರಾಮನ್, ಕೆ.ಪಿ. ಸತೀಶ್ಚಂದ್ರನ್, ಮಾಜಿ ಶಾಸಕ ಸಿ.ಎಚ್. ಕುಞಾಂಬು, ಕೆ.ಆರ್. ಜಯಾನಂದ, ಅಬ್ದುರ್ರಝಾಕ್ ಚಿಪ್ಪಾರ್, ವಿ.ಪಿ.ಪಿ. ಮುಸ್ತಾ ಮೊದಲಾದವರು ಉಪಸ್ಥಿತರಿದ್ದರು.