ಸಮಸ್ತ 90ನೆ ವಾರ್ಷಿಕ ಮಹಾಸಮ್ಮೇಳನದ ಸಂದೇಶ ಯಾತ್ರೆಗೆ ಚಾಲನೆ
ಮಂಗಳೂರು, ಜ.15: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 90ನೆ ವಾರ್ಷಿಕ ಮಹಾಸಮ್ಮೇಳನದ ಸಂದೇಶ ಯಾತ್ರೆಯು ಶುಕ್ರವಾರ ಸಂಜೆ ನಗರದ ಬಂದರ್‌ನ ಕೇಂದ್ರ ಜುಮಾ ಮಸೀದಿಯಿಂದ ಸೈಯದ್ ವೌಲಾ ಜಲಾಲ್ ಮಸ್ತಾನ್ ಮಖಾಂ ಝಿಯಾರತ್‌ನೊಂದಿಗೆ ಆರಂಭಗೊಂಡಿತು.
ಝಿಯಾರತ್‌ನ ನೇತೃತ್ವವನ್ನು ವಹಿಸಿದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೋಶಾಕಾರಿ ಸೈಯದ್ ಜಿಫ್ರಿ ಮುತ್ತುಕೋಯ ತಂಳ್, ಸಮಸ್ತದ ಪತಾಕೆಯನ್ನು ಹಸ್ತಾಂತರಿಸುವ ಮೂಲಕ ಸಂದೇಶ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಸಮಸ್ತದ ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಹಾಗೂ ಸಂದೇಶ ಯಾತ್ರೆ ಅಧ್ಯಕ್ಷ ಕೋಟುಮಲೆ ಟಿ.ಎಂ.ಬಾಪು ಮುಸ್ಲಿಯಾರ್, ಸಮಸ್ತದ ಸದಸ್ಯ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಸಮಸ್ತ ಮುಶಾವರ ಸದಸ್ಯ ಉಮರ್ ಮುಸ್ಲಿಯಾರ್ ಕೊಯ್ಯೋಡು, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಕಾರ್ಯದರ್ಶಿ ಖಾಸಿಂ ಮುಸ್ಲಿಯಾರ್, ಕಲ್ಲಿಕೋಟೆಯ ಖಾಝಿ ಸೈಯದ್ ಮುಹಮ್ಮದ್ ಕೋಯ ಜಮಾಲುಲ್ಲೆಲಿ ತಂಳ್, ಮದ್ರಸ ಮ್ಯಾನೇಜ್‌ಮೆಂಟ್‌ನ ದ.ಕ. ಜಿಲ್ಲಾಧ್ಯಕ್ಷ ಐ.ಮೊದಿನಬ್ಬ ಹಾಜಿ, ನಾಸಿರ್ ೈಝಿ ಕೂಡತ್ತಾಯ, ಕೊಡಗು ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸೈಯದ್ ಅಮೀರ್ ತಂಳ್, ಸ್ವಾದಿಕ್ ತಂಳ್ ಕುಂಬಳೆ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎ.ಎಚ್. ನೌಶಾದ್ ಹಾಜಿ ಸೂರಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಮಸ್ತದ ಜಿಲ್ಲಾ ಕಾರ್ಯದರ್ಶಿ ಬಂಬ್ರಾಣ ಅಬ್ದುಲ್ ಖಾದರ್ ಅಲ್‌ಖಾಸಿಮಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಚಾಲಕ ಜಿ.ಎಂ.ಶಾಹುಲ್ ಹಮೀದ್ ಮೆಟ್ರೊ ವಂದಿಸಿದರು.